ಟ್ರಂಪ್ ಕೊರೋನ ನಿಭಾಯಿಸಿದ ರೀತಿ ಅವರ ಅಧ್ಯಕ್ಷಗಿರಿಯಷ್ಟೇ ಕೆಟ್ಟದು: ಜೋ ಬೈಡನ್ ಆರೋಪ

Update: 2020-10-14 17:03 GMT

ವಾಶಿಂಗ್ಟನ್, ಅ. 14: ಕೊರೋನ ವೈರಸ್ ಸಾಂಕ್ರಾಮಿಕವನ್ನು ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಭಾಯಿಸಿದ ರೀತಿಯು, ಅಧ್ಯಕ್ಷರಾಗಿ ಅವರ ಕಾರ್ಯನಿರ್ವಹಣೆಯಷ್ಟೇ ಕೆಟ್ಟದಾಗಿದೆ ಎಂದು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ರ ಎದುರಾಳಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಹೇಳಿದ್ದಾರೆ.

ಟ್ರಂಪ್‌ರ ನಾಯಕತ್ವವು ‘ಗೊಂದಲಕಾರಿ ಮತ್ತು ವಿಭಜನಕಾರಿ’ಯಾಗಿದೆ ಹಾಗೂ ಅದಕ್ಕೆ ಅಮೆರಿಕನ್ನರು ಭಾರೀ ಬೆಲೆ ತೆತ್ತಿದ್ದಾರೆ ಎಂದು ದೇಶದ ಮಾಜಿ ಉಪಾಧ್ಯಕ್ಷರೂ ಆಗಿರುವ ಬೈಡನ್ ನುಡಿದರು.

‘‘ಡೊನಾಲ್ಡ್ ಟ್ರಂಪ್ ಜನರ ಪ್ರಾಣಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಹಾಗೂ ಅವರು ಕಾಳಜಿ ವಹಿಸುವುದು ತನ್ನ ಬಗ್ಗೆ ಮಾತ್ರ ಎಂಬಂತೆ ಕಂಡುಬರುತ್ತದೆ’’ ಎಂದು ಅವರು ವಾಗ್ದಾಳಿ ಮಾಡಿದರು.

‘‘ಈ ಸಾಂಕ್ರಾಮಿಕವನ್ನು ಅವರು ನಿಭಾಯಿಸಿದ ರೀತಿಯು ಅಧ್ಯಕ್ಷರಾಗಿ ಅವರ ಕಾರ್ಯನಿರ್ವಹಣೆಯಷ್ಟೇ ಅಸ್ತವ್ಯಸ್ತ. ಇದರಿಂದಾಗಿ ಫ್ಲೋರಿಡ ರಾಜ್ಯ ಹಾಗೂ ದೇಶಾದ್ಯಂತ ಜನರಿಗೆ ಈಗಾಗಲೇ ಲಭಿಸಬೇಕಾಗಿರುವ ನೆಮ್ಮದಿಯು ಇನ್ನೂ ಸಿಕ್ಕಿಲ್ಲ’’ ಎಂದು ಫ್ಲೋರಿಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News