ಈ ಪ್ರಾಣಿಯ ಅಸ್ಥಿಪಂಜರ 26 ಕೋಟಿ ರೂ.ಗೆ ಹರಾಜು

Update: 2020-10-14 17:32 GMT

ಪ್ಯಾರಿಸ್, ಅ. 14: ಸುಮಾರು 15 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಅಲೆದಾಡಿದ್ದ ಮಾಂಸಾಹಾರಿ ಡೈನೊಸಾರ್ ಒಂದರ ಬಹುತೇಕ ಸುಸ್ಥಿತಿಯಲ್ಲಿರುವ ಅಸ್ಥಿಪಂಜರವು ಮಂಗಳವಾರ ಪ್ಯಾರಿಸ್ ಆಕ್ಷನ್ ಹೌಸ್‌ನಲ್ಲಿ 3 ಮಿಲಿಯ ಯುರೋ (ಸುಮಾರು 26 ಕೋಟಿ ರೂಪಾಯಿ)ಗೆ ಮಾರಾಟವಾಗಿದೆ.

ಆ್ಯಲೊಸಾರಸ್ ಡೈನೊಸಾರಸ್‌ನ ಅಸ್ಥಿಪಂಜರವನ್ನು ಅಮೆರಿಕದ ವ್ಯೋಮಿಂಗ್ ರಾಜ್ಯದಲ್ಲಿ ಮೂರು ವರ್ಷಗಳ ಹಿಂದೆ ಅಗೆದು ತೆಗೆಯಲಾಗಿತ್ತು. ಅದನ್ನು ಮಂಗಳವಾರ ನಡೆದ ಹರಾಜಿನಲ್ಲಿ ವಿದೇಶಿ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಅಸ್ಥಿಪಂಜರವು 3.5 ಮೀಟರ್ ಎತ್ತರ ಹಾಗೂ 10 ಮೀಟರ್ ಉದ್ದವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News