ಅ.16ರಿಂದ ವಿ4 ಸ್ಟ್ರೀಮ್‍ನಲ್ಲಿ ಮೂಡಿಬರಲಿದೆ ‘ಮೈ ಹಸ್ಬೆಂಡ್ಸ್ ವೈಫ್’ ಚಲನಚಿತ್ರ

Update: 2020-10-15 18:25 GMT

ಮಂಗಳೂರು : ಹೊಸ ಹೊಸ ಸಿನೆಮಾ, ಹೊಸ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹೊತ್ತುತರುತ್ತಿರುವ ಕನ್ನಡದ ಮೊಟ್ಟ ಮೊದಲ ಓಟಿಟಿ ಪ್ಲಾಟ್‍ಫಾರಂ ವಿ4 ಸ್ಟ್ರೀಮ್‍ನಲ್ಲಿ ರಿಲೀಸ್ ಆಗಲಿರುವ ಇನ್ನೊಂದು ಸಿನೆಮಾ ಮೈ ಹಸ್ಬೆಂಡ್ಸ್ ವೈಫ್. ಈ ಸಿನಿಮಾ ‘ವಿ4 ಸ್ಟ್ರೀಮ್’ನಲ್ಲಿ ಅ.16ರಂದು ರಿಲೀಸ್ ಆಗುತ್ತಿದೆ.

‘ಮೈ ಹಸ್ಬೆಂಡ್ಸ್ ವೈಫ್’ ವಿದೇಶದಲ್ಲಿ ನೆಲೆಸಿದ ಭಾರತೀಯ ಕುಟುಂಬದ ಕುರಿತಾದ ಚಿತ್ರವಾಗಿದೆ. ಈ ಸಿನಿಮಾ ಕೂಡುಕುಟುಂಬದ ಪ್ರೀತಿ, ಜೊತೆಗೆ ಗಂಡ ಹೆಂಡತಿ ಮನಸ್ತಾಪದ ಕುರಿತಾಗಿ ಹೇಳುವ ಈ ಸಿನೆಮಾ ಜಿ. ಕೃಷ್ಣಮೂರ್ತಿರವರ ನಿರ್ಮಾಣದಲ್ಲಿ ವಿನೋದ್ ಛಾಬ್ರಾ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.

ಹೊರದೇಶದಲ್ಲಿ ವಾಸಿಸುತ್ತಿರುವ ಕರುನಾಡ ಕೂಡುಕುಟುಂಬದ ಕಥೆ ಇದಾಗಿದ್ದು ಒಂದು ಸಂಪ್ರದಾಯಸ್ಥ ಮನೆ ಹುಡುಗಿ ಬಿಂದಾಸ್ ಹುಡುಗನ ಮದುವೆಯಾಗಿ ಇವರಿಬ್ಬರ ನಡುವಿನ ಹೊಂದಾಣಿಕೆ ಸರಿಯಿಲ್ಲದೆ ಯಾವ ರೀತಿಯ ಕಷ್ಟಗಳು ಎದುರಾಗುತ್ತದೆ. ಕೂತು ಬಗೆಹರಿಸುವ ಸಮಸ್ಯೆ, ಜಗಳವಾಡಿ ಮಾತುಕತೆ ಮುರಿದು ಮನಸ್ಥಾಪ ಇನ್ನಷ್ಟು ಹೆಚ್ಚಾಗಿ ಈ ಮನಸ್ಥಾಪದಿಂದಾಗಿ ಗಂಡ ಇನ್ನೊಬ್ಬ ಹೆಣ್ಣನ್ನು ಅರಿಸಿ ಹೋಗಿ ಜೊತೆಗೆ ತನ್ನ ಹಳೆಯ ಎಲ್ಲಾ ಚಾಳಿಯನ್ನು ಆರಂಭಿಸಿಕೊಳ್ಳುತ್ತಾನೆ. ಇತ್ತ ತನ್ನ ಮನೆಯವರ ಪ್ರೀತಿ-ವಿಶ್ವಾಸಕ್ಕೆ ಕಟ್ಟುಬಿದ್ದು, ಗಂಡನ ಅಸಭ್ಯ ವರ್ತನೆ ಯನ್ನು ಕಣ್ಣಮುಂದೆ ನೋಡುತ್ತಾ ಸಹಿಸಲಾಗದೆ ಇರುವ ಮುಗ್ಧ ಹೆಣ್ಣಿನ ಕಥೆಯೂ ಇದಾಗಿದೆ.

ಎಸ್. ಸಚೀಂದ್ರ ಅವರ ಸುಂದರ ಚಿತ್ರಕಥೆ ಇದಾಗಿದ್ದು ರವಿರಾಜ್ ಮತ್ತು ಕುಮಾರ್.ಇ.ವಿ. ಅವರ ಉತ್ತಮ ಸಂಭಾಷಣೆ ಈ ಚಿತ್ರಕ್ಕಿದೆ. ಅಲಿಸ, ಪವನ್, ರಾಖಿ, ಪ್ರೇಮ್ ಚೋಪ್ರಾ ಮೊದಲಾದವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉತ್ತಮ ನಟನೆಯೊಂದಿಗೆ ಭಾವನೆಗಳ ಸಮ್ಮಿಳಿತವನ್ನು ಹೊಂದಿರುವ ಸಿನೆಮಾ ಇದಾಗಿದೆ.

ಈ ಸಿನೆಮಾದಲ್ಲಿ ಒಟ್ಟು 5 ಹಾಡುಗಳಿದ್ದು ಫ್ಯಾಮಿಲಿ ಸಾಂಗ್, ರೊಮ್ಯಾಂಟಿಕ್ ಸಾಂಗ್ಸ್ ಜೊತೆಗೆ ಪ್ಯಾತೋ ಸಾಂಗ್ ಕೂಡ ಇದೆ. ಹಾಡುಗಳಿಗೆ ದಿನೇಶ್ ಅರ್ಜುನ್ ಸಂಗೀತವನ್ನು ನೀಡಿದ್ದು, ಹೇಮಂತ್, ಬದ್ರಿ ಪ್ರಸಾದ್, ಶಮಿತಾ ಮಲ್ನಾಡ್, ಸುಪ್ರಿಯಾ ಲೋಹಿತ್, ಸುಜಾತದತ್, ಶೃತಿ ಮೊದಲಾದ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಜೊತೆಗೆ ಖ್ಯಾತ ನಟ ನಟಿಯರ ಉತ್ತಮ ನಟನೆಯೊಂದಿಗೆ ಭಾವನೆಗಳ ಸಮ್ಮಿಳಿತವನ್ನು ಹೊಂದಿರುವ ಸಿನೆಮಾ ಇದಾಗಿದೆ. ಒಟ್ಟಿನಲ್ಲಿ ಅಕ್ಟೋಬರ್ 16ರಂದು ವಿ4 ಸ್ಟ್ರೀಮ್ ಒಟಿಟಿಯಲ್ಲಿ ಸಿನೆಮಾ ರಿಲೀಸ್ ಆಗಲಿದ್ದು, ನೋಡಿ ಆನಂದಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News