ಹಿರಿಯ ಕ್ರೀಡಾ ಪತ್ರಕರ್ತ ಭಿಮಾನಿ ನಿಧನ

Update: 2020-10-15 18:58 GMT

ಕೋಲ್ಕತಾ: ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಕಿಶೋರ್ ಭಿಮಾನಿ (74) ಗುರುವಾರ ನಿಧನರಾದರು.

1987 ರಲ್ಲಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಡ್ರಾಗೊಂಡ ಪಂದ್ಯದಲ್ಲಿ ಸುನೀಲ್‌ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಪಂದ್ಯದಲ್ಲಿ ಭಿಮಾನಿ ವೀಕ್ಷಕ ವಿವರಣೆಗಾರನಾಗಿದ್ದರು.

 1980ರ ದಶಕದಲ್ಲಿ ಭಾರತದ ಖ್ಯಾತ ಕ್ರಿಕೆಟ್ ಬರಹಗಾರರಲ್ಲಿ ಒಬ್ಬರಾಗಿದ್ದ ಭಿಮಾನಿ 1986ರ ಆಸ್ಟ್ರೇಲಿಯದ ವಿರುದ್ಧ ಚೆಪಾಕ್‌ನಲ್ಲಿ ನಡೆದ ಟೈ ಆಗಿದ್ದ ಟೆಸ್ಟ್ ಪಂದ್ಯದ ಅಂತಿಮ ಕ್ಷಣಗಳ ವಿವರಣೆ ನೀಡಿದ್ದರು. ಪಾಕ್‌ನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಕೋಲ್ಕತಾಕ್ಕೆ ಬಂದರೆ ತಪ್ಪದೆ ಭಿಮಾನಿಯವರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗುತ್ತಿದ್ದರು ಎಂದು ಹೇಳಲಾಗುತ್ತದೆ.

 ಭಿಮಾನಿ ಕೋಲ್ಕತಾ ದಿನಪತ್ರಿಕೆ ‘ದಿ ಸ್ಟೇಟ್ಸ್‌ಮನ್’ನಲ್ಲಿ ಕೆಲಸ ಮಾಡಿದ್ದರು, ಪ್ರಸಿದ್ಧ ಅಂಕಣಕಾರರಾಗಿದ್ದರು ಮತ್ತು ‘ದಿ ಆಕ್ಸಿಡೆಂಟಲ್ ಗಾಡ್ಮನ್’ ಅಂಕಣದಲ್ಲಿ ಬರೆಯುತ್ತಿದ್ದರು. ಅವರು 1978 ರಿಂದ 1980 ರವರೆಗೆ ಕೋಲ್ಕತಾ ಸ್ಪೋರ್ಟ್ಸ್‌ಜರ್ನಲಿಸ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News