ಅಫ್ಘಾನ್: ಕಾರ್‌ ಬಾಂಬ್ ದಾಳಿಗೆ ಕನಿಷ್ಠ 12 ಮಂದಿ ಬಲಿ

Update: 2020-10-18 16:31 GMT
ಸಾಂದರ್ಭಿಕ ಚಿತ್ರ

ಕಾಬೂಲ್,ಅ.18: ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಪೊಲೀಸ್ ಮುಖ್ಯ ಕಾರ್ಯಾಲಯವನ್ನು ಗುರಿಯಾಗಿರಿಸಿ ರವಿವಾರ ಭಯೋತ್ಪಾದಕರು ನಡೆಸಿದ ಕಾರ್‌ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಮಂದಿ ನಾಗರಿಕರು ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ಘೋರ್ ಪ್ರಾಂತದ ರಾಜಧಾನಿ ಫಿರೋಜ್ ಖೋಹ್ ಎಂಬಲ್ಲಿ ಈ ದಾಳಿ ನಡೆದಿದೆ. ಆಂತರಿಕ ಸಂಘರ್ಷದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಇತರ ಭಾಗಗಳಿಗೆ ಹೋಲಿಸಿದರೆ, ಘೋರ್ ಪ್ರಾಂತದಲ್ಲಿ ಹಿಂಸಾತ್ಮಕ ಪ್ರಕರಣಗಳು ವಿರಳವಾಗಿದ್ದವು.

 ಸ್ಫೋಟಕಗಳನ್ನು ತುಂಬಿದ ಕಾರನ್ನು ಪೊಲೀಸ್ ಮುಖ್ಯ ಕಾರ್ಯಾಲಯದ ಮುಂದೆ ಡಿಟೋನೇಟರ್‌ನಲ್ಲಿ ಇರಿಸಿ ಸ್ಫೋಟಿಸಲಾಗಿತ್ತು. ಈವರೆಗೆ ಯಾವುದೇ ಸಂಘಟನೆಯು ಸ್ಫೋಟದ ಹೊಣೆಯನ್ನು ವಹಿಸಿಕೊಂಡಿರಲಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಅಫ್ಘಾನ್‌ನ ವಿವಿಧೆಡೆ ತಾಲಿಬಾನ್ ಹಾಗೂ ಸರಕಾರಿ ಪಡೆಗಳ ನಡುವಿನ ಘರ್ಷಣೆ ತೀವ್ರಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News