ಕೊರೋನ ಸೋಂಕಿನ ತಿಂಗಳ ಬಳಿಕವೂ ಉಸಿರಾಟದ ಸಮಸ್ಯೆ: ಆಕ್ಸ್‌ಫರ್ಡ್ ವಿಜ್ಞಾನಿಗಳ ಸಂಶೋಧನೆ

Update: 2020-10-19 16:53 GMT

ಲಂಡನ್, ಅ. 19: ಆಸ್ಪತ್ರೆಗಳಿಂದ ಬಿಡುಗಡೆಗೊಂಡ ಅರ್ಧಕ್ಕಿಂತ ಹೆಚ್ಚಿನ ಕೊರೋನ ವೈರಸ್ ರೋಗಿಗಳು, ಸೋಂಕಿಗೆ ಒಳಗಾದ ನಂತರದ 2-3 ತಿಂಗಳುಗಳವರೆಗೂ ಉಸಿರಾಟದ ತೊಂದರೆ, ದಣಿವು, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಬ್ರಿಟನ್‌ನಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.

 ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ತಂಡವು, ಕೊರೋನ ವೈರಸ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ 58 ರೋಗಿಗಳ ಮೇಲೆ ಸಂಶೋಧನೆ ನಡೆಸಿತು. ಈ ರೋಗಿಗಳ ಮೇಲೆ ಸಾಂಕ್ರಾಮಿಕವು ಬೀರಿದ ದೀರ್ಘಾವಧಿ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಸಿತು.

ಕೊರೋನ ವೈರಸ್ ಸೋಂಕಿಗೆ ಒಳಗಾದ ರೋಗಿಗಳ ಬಹು ಅಂಗಗಳ ಕಾರ್ಯವೈಖರಿಯಲ್ಲಿ ಅಸಮರ್ಪಕತೆಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅದೂ ಅಲ್ಲದೆ ಕೆಲವು ರೋಗಿಗಳಲ್ಲಿ ಹಲವು ತಿಂಗಳುಗಳ ಕಾಲ ಊತ ಕಂಡುಬಂದಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News