ತೈವಾನ್‌ನೊಂದಿಗೆ ವ್ಯಾಪಾರ ಒಪ್ಪಂದ: ಮಾತುಕತೆ ಆರಂಭಕ್ಕೆ ಕೇಂದ್ರದ ಒಲವು

Update: 2020-10-20 16:08 GMT

ಹೊಸದಿಲ್ಲಿ, ಅ.20: ತೈವಾನ್‌ನೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಔಪಚಾರಿಕವಾಗಿ ಮಾತುಕತೆ ಪ್ರಾರಂಭಿಸಲು ಕೇಂದ್ರ ಸರಕಾರದಲ್ಲಿ ಬೆಂಬಲ ಹೆಚ್ಚುತ್ತಿದೆ ಮತ್ತು ಸರಕಾರವೂ ಈ ಬಗ್ಗೆ ಒಲವು ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ

ಉಭಯ ದೇಶಗಳು ಚೀನಾದೊಂದಿಗೆ ಹೊಂದಿದ್ದ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಉಪಕ್ರಮ ಆರಂಭಿಸಲು ಒಲವು ತೋರಿದೆ ಎಂದು ಅಧಿಕಾರಿ ಹೇಳಿದ್ದಾರೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಹಲವು ವರ್ಷಗಳಿಂದ ತೈವಾನ್ ಬಯಸಿತ್ತು. ಆದರೆ ಭಾರತ- ತೈವಾನ್ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದು, ವಿಶ್ವ ವ್ಯಾಪಾರ ಸಂಘಟನೆ(ಡಬ್ಲುಟಿಒ)ಯಲ್ಲಿ ದಾಖಲಾದರೆ, ಇದರಿಂದ ಚೀನಾದ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಕೇಂದ್ರ ಸರಕಾರ ಹಿಂಜರಿದಿತ್ತು. ಆದರೆ ಇದೀಗ ಭಾರತ-ಚೀನಾ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಚೀನಾದ ವಿರೋಧಿ ತೈವಾನ್‌ನೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ಆಸಕ್ತಿ ಇರುವವರ ಕೈ ಮೇಲಾಗಿದೆ. ತೈವಾನ್‌ನೊಂದಿಗಿನ ವ್ಯಾಪಾರ ಸಂಬಂಧದಿಂದ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯನ್ನು ಎದುರು ನೋಡುತ್ತಿರುವ ಭಾರತದ ಉದ್ದೇಶ ಈಡೇರಲಿದೆ. ಆದರೆ ಮಾತುಕತೆ ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ಆಗಬೇಕಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತೈವಾನ್‌ನ ಫಾಕ್ಸಾನ್ ಟೆಕ್ನಾಲಜಿ ಗ್ರೂಫ್, ವಿಸ್ಟ್ರನ್ ಕಾರ್ಪ್ ಮತ್ತು ಪೆಗಟ್ರಾನ್ ಕಾರ್ಪ್ ಸಂಸ್ಥೆಗೆ ಭಾರತದಲ್ಲಿ ವ್ಯವಹಾರ ನಡೆಸಲು ಈ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News