ಗುಜರಾತ್ ವಿಧಾನ ಸಭೆ ಉಪ ಚುನಾವಣೆ: 8 ಸ್ಥಾನಗಳಿಗೆ 81 ಅಭ್ಯರ್ಥಿಗಳು ಸ್ಪರ್ಧೆ

Update: 2020-10-20 16:14 GMT

ಅಹ್ಮದಾಬಾದ್, ಅ. 20: ಗುಜರಾತ್‌ನ 8 ಸ್ಥಾನಗಳಿಗೆ ನವೆಂಬರ್ 3ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಒಟ್ಟು 81 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಚುನಾವಣಾ ಆಯೋಗ ಮಂಗಳವಾರ ಹೇಳಿದೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಬ್ದಾಸಾ, ಲಿಂಬ್ಡಿ, ಮೊರ್ಬಿ, ಧಾರಿ, ಗಧಾಡಾ, ಕರ್ಜನ್, ದಾಂಗ್ ಹಾಗೂ ಕಪ್ರಾಡ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಹಿಂದೆ ತೆಗೆಯಲು ಕೊನೆಯ ದಿನಾಂಕ ಸೋಮವಾವಾರ ಆಗಿತ್ತು. ಚುನಾವಣಾ ಆಯೋಗ 8 ಸ್ಥಾನಗಳಿಗೆ 102 ನಾಮಪತ್ರಗಳನ್ನು ಸ್ವೀಕರಿಸಿತ್ತು. ಇದರಲ್ಲಿ 21 ನಾಮಪತ್ರಗಳನ್ನು ಸೋಮವಾರ ಹಿಂದೆ ತೆಗೆಯಲಾಗಿತ್ತು. ಈಗ 81 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅವರ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ. ಲಿಂಬ್ಡಿಯಲ್ಲಿ ಅತ್ಯಧಿಕ 14 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಪ್ರಾಡ ಎಸ್‌ಟಿ ಅಭ್ಯರ್ಥಿಗೆ ಮೀಸಲು. ಇಲ್ಲಿ ಅತಿ ಕಡಿಮೆ ಅಂದರೆ 4 ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸುತ್ತಿದ್ದಾರೆ. ಮೊರ್ಬಿಯ ಫ್ರೇಯ್ ಹಾಗೂ ಗಧಾಡಾದಲ್ಲಿ ತಲಾ 12 ಅಭ್ಯರ್ಥಿಗಳು ಸ್ಫರ್ಧಿಸುತ್ತಿದ್ದಾರೆ. ಧಾರಿಯಲ್ಲಿ 11, ಅಭ್ಡಾಸಾದಲ್ಲಿ 10 ಹಾಗೂ ಕರ್ಜಾನ್, ದಾಂಗ್‌ನಲ್ಲಿ ತಲಾ 9 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News