ಹಾಥರಸ್ ಪ್ರಕರಣದ ಓರ್ವ ಆರೋಪಿ ಅಪ್ರಾಪ್ತ: ಸಿಬಿಐ

Update: 2020-10-20 16:19 GMT

ಹಾಥರಸ್ (ಉತ್ತರಪ್ರದೇಶ), ಅ. 20: ಹಾಥರಸ್‌ನ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಪ್ರಮಖ ಬೆಳವಣಿಗೆಯೊಂದರಲ್ಲಿ ನಾಲ್ವರು ಆರೋಪಿಗಳಲ್ಲಿ ಓರ್ವ ಅಪ್ರಾಪ್ತ ಎಂಬುದನ್ನು ಸಿಬಿಐ ಪತ್ತೆ ಮಾಡಿದೆ. ಸಿಬಿಐ ತಂಡ ಆರೋಪಿಯ ಮನೆಗೆ ತೆರಳಿ, ಆತನ ಮಾರ್ಕ್ಸ್ ಕಾರ್ಡ್ ಪಡೆದುಕೊಂಡಿತ್ತು. ಈ ಸಂದರ್ಭ ಆತ ಅಪ್ರಾಪ್ತ ಎಂಬುದು ತಿಳಿದು ಬಂತು. ಅಲ್ಲದೆ, ಆತನ ತಾಯಿ ಕೂಡ ತನ್ನ ಪುತ್ರ ಅಪ್ರಾಪ್ತ ಎಂದು ಹೇಳಿದ್ದರು. ‘‘ನನ್ನ ಅಪ್ರಾಪ್ತ ಪುತ್ರನ ಅಂಕ ಪಟ್ಟಿಯೊಂದಿಗೆ ಹಿರಿಯ ಪುತ್ರನ ಬಟ್ಟೆಗಳನ್ನು ಅವರು ಕೊಂಡೊಯ್ದಿದ್ದಾರೆ’’ ಎಂದು ಅಪ್ರಾಪ್ತ ಆರೋಪಿಯ ತಾಯಿ ಹೇಳಿದ್ದಾರೆ.

ಹಾಥರಸ್ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಅಲಿಗಢ ಕಾರಾಗೃಹದಲ್ಲಿ ಇರಿಸಲಾಗಿದೆ. ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನಾಲ್ವರನ್ನು ಸೋಮವಾರ 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಆರೋಪಿಯ ಅಂಕಪಟ್ಟಿಯಿಂದ ಆತ ಅಪ್ರಾಪ್ತ ಎಂದು ಗೊತ್ತಾಗಿದೆ. ಇದು ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ ಉತ್ತರಪ್ರದೇಶ ಪೊಲೀಸರ ಲೋಪದತ್ತ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News