3 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಡ್ರೋನ್ ಬಳಕೆಗೆ ಕೇಂದ್ರದ ಅಸ್ತು

Update: 2020-10-23 16:45 GMT

 ಹೊಸದಿಲ್ಲಿ, ಅ.23: ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿರುವ ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮ (ಎನ್‌ಟಿಪಿಸಿ) ಮಾಲಕತ್ವದ ಮೂರು ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಸಂಶೋಧನೆ ಹಾಗೂ ಪರಿಶೀಲನಾ ಚಟುವಟಿಕೆಗಳಿಗಾಗಿ ಡ್ರೋನ್‌ಗಳನ್ನು ಬಳಸಲು, ನಾಗರಿಕ ವಾಯುಯಾನ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ.

 ಮಧ್ಯಪ್ರದೇಶದ ವಿಂಧ್ಯಾಚಲ ಹಾಗೂ ಗದರ್‌ವಾರಾದಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ಛತ್ತೀಸ್‌ಗಢದ ಸಿಯಾಪಟ್‌ನಲ್ಲಿರುವ ಉಷ್ಣ ವಿದ್ಯುತ್ ಯೋಜನೆಗಳಲ್ಲಿ ಎನ್‌ಟಿಪಿಸಿಯು ಡ್ರೋನ್‌ಗಳನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ವಾಯುಯಾನ ಸಚಿವಾಲಯವು , ಡ್ರೋನ್ ಕುರಿತ ನಿಯಮಾವಳಿಗಳಲ್ಲಿ ಕೆಲವೊಂದು ಶರ್ತಬದ್ಧ ವಿನಾಯಿತಿಗಳನ್ನು ನೀಡಿದೆ.

ಈ ಶರ್ತಬದ್ಧ ವಿನಾಯಿತಿಗಳು ಡಿಸೆಂಬರ್ 31ರವರೆಗೆ ಊರ್ಜಿತದಲ್ಲಿರುವುದು ಎಂದು ಸಚಿವಾಲಯ ತಿಳಿಸಿದೆ.

 ಈ ಮೂರು ಸ್ಥಾವರಗಳಲ್ಲಿ ಭೂಪ್ರದೇಶದ ಮ್ಯಾಪಿಂಗ್,ದಾಸ್ತಾನುಗಳ ವಿಶ್ಲೇಷಣೆ, ವೈಮಾನಿಕ ಪರಿಶೀಲನೆ ಮತ್ತಿತರ ಚಟುವಟಿಕೆಗಳನ್ನು ನಡೆಸುವುಕ್ಕಾಗಿ ಎನ್‌ಟಿಪಿಸಿಯು ಡ್ರೋನ್‌ಗಳನ್ನು ಬಳಸಿಕೊಳ್ಳಲಿದೆ ಎಂದು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಂಬರ್ ದುಬೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News