ಚೀನಾ ಯುದ್ಧಕ್ಕೆ ಹೆದರುವುದಿಲ್ಲ: ಜಿನ್‌ಪಿಂಗ್

Update: 2020-10-23 16:50 GMT

ಬೀಜಿಂಗ್ (ಚೀನಾ), ಅ. 23: ಚೀನಾವು ಯುದ್ಧಕ್ಕೆ ಹೆದರುವುದಿಲ್ಲ ಹಾಗೂ ತನ್ನ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳು ಅವಗಣನೆಗೆ ಒಳಗಾಗಲು ಅದು ಬಿಡುವುದಿಲ್ಲ ಎಂದು ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಹೇಳಿದ್ದಾರೆ.

ಚೀನಾ ಸೈನಿಕರು ಕೊರಿಯ ಯುದ್ಧಕ್ಕೆ ಪ್ರವೇಶಗೈದ 70ನೇ ವಾರ್ಷಿಕ ದಿನದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

 ಯಾವುದೇ ರೀತಿಯ ಏಕಪಕ್ಷೀಯತೆ, ಏಕಸ್ವಾಮ್ಯ ಮತ್ತು ಪೀಡನೆಯು ಯಶಸ್ವಿಯಾಗುವುದಿಲ್ಲ ಹಾಗೂ ಅದು ಖಂಡಿತವಾಗಿಯೂ ವಿಫಲವಾಗುತ್ತದೆ ಎಂದು ರಾಜಧಾನಿ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ಚೀನಾ ಮತ್ತು ಅಮೆರಿಕಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಮಹತ್ವ ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News