ಶಾಲಾ-ಕಾಲೇಜುಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ ಕೇಂದ್ರ ಸರಕಾರ

Update: 2020-10-28 05:55 GMT

ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯ ಈಗಿರುವ ಅನ್ ಲಾಕ್-5ರ ಮಾರ್ಗಸೂಚಿಗಳಲ್ಲಿ ಯಾವುದೇ ಹೊಸ ಬದಲಾವಣೆ ಮಾಡದೇ ಈಗಿರುವ ಮಾರ್ಗಸೂಚಿಯನ್ನೇ ನವೆಂಬರ್ 30ರ ತನಕ ವಿಸ್ತರಿಸಿದೆ. ಆದಾಗ್ಯೂ ಕಂಟೈನ್ ಮೆಂಟ್ ವಲಯದ ನಿಯಮಗಳು ಕಠಿಣವಾಗಿರುತ್ತದೆ.

ಶಾಲೆಗಳು, ಕಾಲೇಜುಗಳು ಹಾಗೂ ಶಿಕ್ಷಣಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳು ಇಂತಿವೆ

1.ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶಾಲೆಗಳು ಹಾಗೂ ಇತರ ಶೈಕ್ಷಣಿಕೆ ಸಂಸ್ಥೆಗಳನ್ನು ಮರು ಆರಂಭಿಸುವ ಅಧಿಕಾರ ಹೊಂದಿವೆ.

2. ವೈರಸ್ ಹರಡುವುದನ್ನು ತಡೆಗಟ್ಟಲು ಆನ್ ಲೈನ್ ತರಗತಿಗಳ ಹೆಚ್ಚಳಕ್ಕೆ ಸೂಚಿಸಬಹುದು. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗದಿರುವ ಆಯ್ಕೆಯೂ ಇರುತ್ತದೆ.

3. ಆದಾಗ್ಯೂ ವಿದ್ಯಾರ್ಥಿಗಳು ಶಾಲೆಗೆ ಹೋಗಲು ನಿರ್ಧರಿಸಿದರೆ, ಹೆತ್ತವರು ಅಥವಾ ರಕ್ಷಕರ ಸಮ್ಮತಿ ಕಡ್ಡಾಯ

4. ಕೇಂದ್ರದ ಅನ್ ಲಾಕ್ -5ರ ಗೈಡ್ ಲೈನ್ ಗಳ ಪ್ರಕಾರ ರಾಜ್ಯಗಳುಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಸ್ ಒಪಿ ಗಳನ್ನು ಸಿದ್ದಪಡಿಸುವ ಅಗತ್ಯವಿದೆ.

5.ಪ್ರಯೋಗ ಅಥವಾ ಲ್ಯಾಬ್ ಕೆಲಸದ ಅಗತ್ಯವಿರುವ ವಿಜ್ಞಾನ, ಪಿಎಚ್ ಡಿ ಹಾಗೂ ಪಿಜಿ ವಿದ್ಯಾರ್ಥಿಗಳಿಗಾಗಿ ಉನ್ನತ ಸಂಸ್ಥೆಗಳನ್ನು ತೆರೆಯಬಹುದು.

6. ಹಾಜರಾತಿಯು ಸಂಪೂರ್ಣವಾಗಿ ಹೆತ್ತವರ ಸಮ್ಮತಿಯನ್ನುಅವಲಂಬಿಸಿದ್ದು,  ಶಾಲೆಗಳು ಇದನ್ನು ಬಲವಂತವಾಗಿ ಜಾರಿಗೊಳಿಸುವಂತಿಲ್ಲ.

7. ಸುರಕ್ಷಿತ ಅಂತರವನ್ನು ಖಚಿತಪಡಿಸಿಕೊಳ್ಳಲು ಶಾಲೆಗಳು ವಿದ್ಯಾರ್ಥಿಗಳ ಆಸನ ಯೋಜನೆಯಲ್ಲಿ ಬದಲಾವಣೆ ಮಾಡಬೇಕು.

8. ಶಾಲೆಗಳಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲೇಬೇಕು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎಲ್ಲ ಸಮಯದಲ್ಲೂ ಮುಖಗವಸು ಧರಿಸಬೇಕು

9. ಶಾಲೆಗಳ ಎಲ್ಲ ಕಡೆಗಳಲ್ಲಿ ಸರಿಯಾದ ಸ್ವಚ್ಚತೆ ಹಾಗೂ ನೈರ್ಮಲ್ಯತೆಯನ್ನು ಖಚಿತಪಡಿಸುವುದನ್ನು ಕಡ್ಡಾಯಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News