ಎಪ್ರಿಲ್‌ಗೆ ಮುನ್ನ 16 ರಫೇಲ್ ಯುದ್ಧವಿಮಾನ ವಾಯುಪಡೆಗೆ ಸೇರ್ಪಡೆ

Update: 2020-10-28 15:55 GMT

ಹೊಸದಿಲ್ಲಿ, ಅ.28: ಯುದ್ಧರಂಗದಲ್ಲಿ ವಿವಿಧ ಕಾರ್ಯನಿರ್ವಹಿಸಬಲ್ಲ ಅತ್ಯಾಧುನಿಕ 16 ರಫೇಲ್ ಯುದ್ಧವಿಮಾನಗಳು ಮುಂದಿನ ವರ್ಷದ ಎಪ್ರಿಲ್‌ಗೂ ಮುನ್ನ ಭಾರತದ ವಾಯುಪಡೆಗೆ ನಿಯೋಜನೆಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ಜುಲೈಯಲ್ಲಿ ಐದು ರಫೇಲ್ ವಿಮಾನಗಳು ವಾಯುಪಡೆಯ ಗೋಲ್ಡನ್ ಆ್ಯರೋಸ್ ತುಕಡಿಗೆ ಸೇರ್ಪಡೆಗೊಂಡಿದ್ದರೆ ನವೆಂಬರ್ 5ರಂದು ಮೂರು ವಿಮಾನಗಳು ಫ್ರಾನ್ಸ್‌ನಿಂದ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿವೆ. ಅಲ್ಲದೆ ಫ್ರಾನ್ಸ್‌ನಲ್ಲಿ ಭಾರತದ ವಾಯುಪಡೆಯ ಪೈಲಟ್‌ಗಳಿಗೆ ತರಬೇತಿ ನೀಡಲು 7 ರಫೇಲ್ ಯದ್ಧವಿಮಾನಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜನವರಿಯಲ್ಲಿ 3, ಮಾರ್ಚ್‌ನಲ್ಲಿ 3 ಮತ್ತು ಎಪ್ರಿಲ್‌ನಲ್ಲಿ 7 ರಫೇಲ್ ವಿಮಾನಗಳು ವಾಯುಪಡೆಯ ತುಕಡಿಯನ್ನು ಸೇರಿಕೊಳ್ಳಲಿದೆ. ಇದರೊಂದಿಗೆ ವಾಯುಪಡೆಯ ಗೋಲ್ಡನ್ ಆ್ಯರೋಸ್ ತುಕಡಿಯಲ್ಲಿ 21 ರಫೇಲ್ ಯುದ್ಧವಿಮಾನ(ಒಂದು ಸೀಟ್) ಹಾಗೂ 7 ಅವಳಿ ಸೀಟ್‌ನ ರಫೇಲ್ ತರಬೇತಿ ವಿಮಾನಗಳು ಸೇರ್ಪಡೆಗೊಂಡಂತಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News