ಮೊದಲ ತಲೆಮಾರಿನ ಲಸಿಕೆ ಪರಿಪೂರ್ಣವಾಗಿರದು: ಬ್ರಿಟನ್ ಲಸಿಕೆ ಕಾರ್ಯಪಡೆ ಎಚ್ಚರಿಕೆ

Update: 2020-10-28 16:46 GMT

ಲಂಡನ್, ಅ. 28: ಮೊದಲ ತಲೆಮಾರಿನ ಕೋವಿಡ್-19 ಲಸಿಕೆಗಳು ಪರಿಪೂರ್ಣವಾಗಿರುವ ಸಾಧ್ಯತೆಗಳು ಕಡಿಮೆ ಹಾಗೂ ಅವುಗಳು ಎಲ್ಲರಲ್ಲೂ ಕೆಲಸ ಮಾಡಲಾರವು ಎಂದು ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷೆ ಕೇಟ್ ಬಿಂಗಮ್ ಮಂಗಳವಾರ ಹೇಳಿದ್ದಾರೆ.

‘‘ಆದರೆ, ನಮಗೆ ಯಾವತ್ತಾದರೂ ಲಸಿಕೆ ಸಿಗುತ್ತದೆಯೇ ಎನ್ನುವುದೂ ಗೊತ್ತಿಲ್ಲ. ಸಂತೃಪ್ತ ಮನೋಭಾವ ಮತ್ತು ಅತಿ ನಿರೀಕ್ಷೆಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು’’ ಎಂದು ‘ಲ್ಯಾನ್ಸೆಟ್’ ವೈದ್ಯಕೀಯ ಜರ್ನಲ್‌ನಲ್ಲಿ ಬರೆದ ಲೇಖನವೊಂದರಲ್ಲಿ ಅವರು ಹೇಳಿದ್ದಾರೆ.

‘‘ಮೊದಲ ತಲೆಮಾರಿನ ಲಸಿಕೆಗಳು ಅಪರಿಪೂರ್ಣವಾಗಿರುವ ಸಾಧ್ಯತೆಗಳಿವೆ. ಅವುಗಳು ಸೋಂಕನ್ನು ತಡೆಯದಿದ್ದರೆ ಹಾಗೂ ರೋಗ ಲಕ್ಷಣಗಳನ್ನು ಮಾತ್ರ ಶಮನಗೊಳಿಸಿದರೆ- ಆ ಸಾಧ್ಯತೆಗೂ ನಾವು ಸಿದ್ಧರಾಗಿರಬೇಕು. ಅಷ್ಟಾಗಿಯೂ, ಅವುಗಳು ಎಲ್ಲರಲ್ಲಿಯೂ ಅಥವಾ ದೀರ್ಘ ಕಾಲ ಕೆಲಸ ಮಾಡಲಾರವು ಎನ್ನುವುದೂ ನಮಗೆ ಗೊತ್ತಿರಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News