ನ್ಯೂಝಿಲ್ಯಾಂಡ್: ದಯಾಮರಣ ಪರ ಜನರ ಒಲವು

Update: 2020-10-30 17:49 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಅ. 30: ದಯಾಮರಣವನ್ನು ಕಾನೂನುಬದ್ಧಗೊಳಿಸುವುದರ ಪರವಾಗಿ ನ್ಯೂಝಿಲ್ಯಾಂಡ್ ಮತ ಹಾಕಿದೆ, ಆದರೆ ಮನರಂಜನಾ ಉದ್ದೇಶಕ್ಕಾಗಿ ಮಾದಕ ದ್ರವ್ಯದ ಬಳಕೆಯನ್ನು ಮತದಾರರು ತಿರಸ್ಕರಿಸಿರುವ ಸಾಧ್ಯತೆಯಿದೆ ಎಂದು ದೇಶದ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಈ ತಿಂಗಳು ನಡೆದ ಸಂಸದೀಯ ಚುನಾವಣೆಯ ಸಂದರ್ಭದಲ್ಲಿ ಈ ಎರಡು ಜನಮತಗಣನೆಗಳಿಗೂ ಮತದಾನ ಏರ್ಪಡಿಸಲಾಗಿತ್ತು.

ಗುಣವಾಗದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ದಯಾಮರಣ ನೀಡುವುದಕ್ಕೆ ಅವಕಾಶ ಒದಗಿಸುವ ‘ಎಂಡ್ ಆಫ್ ಲೈಫ್ ಚಾಯಿಸ್ ಮಸೂದೆ’ಗೆ ನಿಮ್ಮ ಅನುಮತಿಯಿದೆಯೇ ಎಂಬುದಾಗಿ ನ್ಯೂಝಿಲ್ಯಾಂಡ್ ಪ್ರಜೆಗಳನ್ನು ಕೇಳಲಾಗಿತ್ತು.

ಆರಂಭಿಕ ಫಲಿತಾಂಶವನ್ನು ಪ್ರಕಟಿಸಿದ ಚುನಾವಣಾ ಆಯೋಗವು, 65.2 ಶೇಕಡಕ್ಕಿಂತಲೂ ಅಧಿಕ ಮತದಾರರು ದಯಾಮರಣಕ್ಕೆ ಅವಕಾಶ ನೀಡುವ ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News