ಮಾಸ್ಕ್ ಧರಿಸದ್ದಕ್ಕೆ 3.5 ಕೋ. ರೂ.ದಂಡ ವಸೂಲಿ!

Update: 2020-10-31 14:06 GMT
ಸಾಂದರ್ಭಿಕ ಚಿತ್ರ

ಮುಂಬೈ,ಅ.31: ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯು ಈ ವರ್ಷದ ಎ.20ರಿಂದ ಅ.29ರವರೆಗಿನ ಅವಧಿಯಲ್ಲಿ ಮುಖಕ್ಕೆ ಮಾಸ್ಕ್ ಧರಿಸದ ತಪ್ಪಿಗಾಗಿ 1,60,279 ಜನರಿಂದ 3,49,34,800 ರೂ. ದಂಡವನ್ನು ವಸೂಲು ಮಾಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಇವು ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸೇರಿವೆ. ಬಿಎಂಸಿ ಒದಗಿಸಿರುವ ಅಂಕಿಅಂಶಗಳಂತೆ ಅ.29ರಂದು ಒಂದೇ ದಿನ 9,107 ಮಾಸ್ಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 18,21,400 ರೂ.ದಂಡವನ್ನು ವಸೂಲು ಮಾಡಲಾಗಿದೆ.

ಕೇಂದ್ರ ಸರಕಾರವು ಶನಿವಾರ ಬಿಡುಗಡೆಗೊಳಿಸಿರುವ ಅಂಕಿಸಂಖ್ಯೆಗಳಂತೆ 1,25,971 ಸಕ್ರಿಯ ಕೊರೋನ ವೈರಸ್ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರವು ದೇಶದಲ್ಲಿಯ ಅತ್ಯಂತ ಪೀಡಿತ ರಾಜ್ಯವಾಗಿ ಮುಂದುವರಿದಿದೆ. ರಾಜ್ಯದಲ್ಲಿ ಈವರೆಗೆ 15,03,050 ಕೋವಿಡ್ ರೋಗಿಗಳು ಗುಣಮುಖರಾಗಿದ್ದು,43,837 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News