ಪಡಿತರ ಚೀಟಿದಾರರಿಗೆ 32 ರೂ. ಗೆ ಈರುಳ್ಳಿ ಮಾರಾಟ ಮಾಡಲಿದೆ ಈ ರಾಜ್ಯ

Update: 2020-10-31 14:34 GMT

ಪಣಜಿ,ಅ.31: ಈರುಳ್ಳಿ ಬೆಲೆಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರಕಾರವು ಮಹಾರಾಷ್ಟ್ರದ ನಾಶಿಕ್‌ನ ರಾಷ್ಟ್ರೀಯ ಸಹಕಾರಿ ಮಾರಾಟ ಒಕ್ಕೂಟ (ನಾಫೆಡ್)ದಿಂದ 1,045 ಮೆ.ಟನ್ ಈರುಳ್ಳಿಯನ್ನು ಖರೀದಿಸಿ 3.5 ಲಕ್ಷ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರಗಳಲ್ಲಿ ಮಾರಾಟ ಮಾಡಲಿದೆ. ಜನರಿಗೆ ಸಬ್ಸಿಡಿ ದರಗಳಲ್ಲಿ ಈರುಳ್ಳಿಯನ್ನು ಪೂರೈಸಲು ಗೋವಾ ಸಂಪುಟವು ಬುಧವಾರ ನಿರ್ಧಾರವನ್ನು ಕೈಗೊಂಡಿತ್ತು.

ನ್ಯಾಯಬೆಲೆ ಅಂಗಡಿಗಳ ಮೂಲಕ ಒಟ್ಟು 3.5 ಲಕ್ಷ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿಗೆ 32 ರೂ.ದರದಲ್ಲಿ ಮೂರು ಕೆ.ಜಿ ಈರುಳ್ಳಿಯನ್ನು ಒದಗಿಸಲಾಗುವುದು ಎಂದು ರಾಜ್ಯ ನಾಗರಿಕ ಪೂರೈಕೆ ಇಲಾಖೆಯ ನಿರ್ದೇಶಕ ಸಿದ್ಧಿವಿನಾಯಕ ನಾಯ್ಕ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಈರುಳ್ಳಿ ನಾಶಿಕ್‌ನಿಂದ ರಾಜ್ಯವನ್ನು ತಲುಪುತ್ತಲೇ ತಮ್ಮ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳುವಂತೆ ಜಾಹೀರಾತುಗಳು, ಎಸ್‌ಎಂಎಸ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News