ಕೇರಳದ ಎಂಟು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಸ್ತರಣೆ

Update: 2020-10-31 18:21 GMT

ತಿರುವನಂತಪುರ,ಅ.31: ಜನರು ಗುಂಪು ಸೇರುವುದನ್ನು ಮತ್ತು ಸಮಾವೇಶಗಳನ್ನು ತಡೆಯಲು ಹಾಲಿ ಚಾಲ್ತಿಯಲ್ಲಿರುವ ನಿಷೇಧಾಜ್ಞೆಯ ಅವಧಿಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಿಸಿ ರಾಜ್ಯದ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಕೋವಿಡ್-19 ನಿಯಂತ್ರಣ ಕ್ರಮಗಳ ಅಂಗವಾಗಿ ಅ.3ರಿಂದ ಅ.31ರವರೆಗೆ ಸಿಆರ್‌ಪಿಸಿಯ ಕಲಂ 144ರಡಿ ರಾಜ್ಯಾದ್ಯಂತ ನಿಷೇಧಾಜ್ಞೆಯನ್ನು ಹೇರಲಾಗಿತ್ತು. ಇದೀಗ ತಿರುವನಂತಪುರ, ಅಲಪ್ಪುಳ, ಇಡುಕ್ಕಿ, ತ್ರಿಶ್ಶೂರು,ವಯನಾಡ್,ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ನ.15ರವರೆಗೆ ಮತ್ತು ಪಾಲಕ್ಕಾಡ್ ಜಿಲ್ಲೆಯಲ್ಲಿ ನ.2ರವರೆಗೆ ವಿಸ್ತರಿಸಲಾಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ನ.15ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ವಯನಾಡ್ ಜಿಲ್ಲಾಡಳಿತವು ಮದುವೆ ಸಮಾರಂಭಗಳನ್ನು 50,ಅಂತ್ಯಕ್ರಿಯೆಗಳನ್ನು 20 ಮತ್ತು ಧಾರ್ಮಿಕ ಸಮಾರಂಭ/ಪ್ರಾರ್ಥನೆಗಳನ್ನು 40 ಜನರಿಗೆ ಮಾತ್ರ ಸೀಮಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News