×
Ad

ವಾಹನಗಳ ಮುಖಾಮುಖಿ ಢಿಕ್ಕಿ: 6 ಮಂದಿ ಮೃತ, 9 ಜನರಿಗೆ ಗಾಯ

Update: 2020-11-02 12:14 IST

ಹೊಸದಿಲ್ಲಿ: ಉತ್ತರಪ್ರದೇಶದ ಬಹರೈಚ್ ನ ಪಯಾಗ್ ಪುರ ಪ್ರದೇಶದಲ್ಲಿ ಎರಡು ವಾಹನಗಳ ಮುಖಾಮುಖಿ ಢಿಕ್ಕಿಯಲ್ಲಿ ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಮೃತಪಟ್ಟಿದ್ದರೆ, ಇತರ 9 ಮಂದಿ ಗಾಯಗೊಂಡಿದ್ದಾರೆ.

ಅಪಘಾತಕ್ಕೀಡಾಗಿರುವ ವ್ಯಾನ್ 16 ಜನರನ್ನು ಹೊತ್ತು ಸಾಗುತ್ತಿತ್ತು. ಸಂತ್ರಸ್ತರು ದರ್ಗಾವೊಂದಕ್ಕೆ ಭೇಟಿ ನೀಡಿ ತಮ್ಮೂರು ಲಕ್ಷ್ಮೀಪುರಕ್ಕೆ ವಾಪಸಾಗುತ್ತಿದ್ದ ವೇಳೆ ರವಿವಾರ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರು ಜನರು ಮೃತಪಟ್ಟಿದ್ದಾರೆ.ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಟಾಧಿಕಾರಿ ಟಿಎನ್ ದುಬೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News