ಪ್ರಧಾನಿಗೆ ಪತ್ರ ಬರೆದು 6 ವರ್ಷಗಳ ಹಿಂದಿನ ಭರವಸೆಗಳನ್ನು ನೆನಪಿಸಿದ ತೇಜಸ್ವಿ ಯಾದವ್

Update: 2020-11-03 09:22 GMT

ಪಾಟ್ನಾ: ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, 6 ವರ್ಷಗಳ ಹಿಂದೆ ಅವರು ಈಡೇರಿಸದ ಭರವಸೆಗಳ ಪಟ್ಟಿ ಮಾಡಿದ್ದಾರೆ.

ನವೆಂಬರ್ 1ರಂದು ಹಿಂದಿಯಲ್ಲಿ ಬರೆದಿರುವ ಎರಡು ಪುಟಗಳ ಪತ್ರವನ್ನು ಆರ್‌ಜೆಡಿ ನಾಯಕ ಯಾದವ್ ಇಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 "ಕಳೆದ ಆರು ವರ್ಷಗಳಲ್ಲಿ ನೀವು ಬಿಹಾರದ ಜನರಿಗೆ ನೀಡಿರುವ ಭರವಸೆಗಳನ್ನು ಮರೆತ್ತಿಲ್ಲ ಎಂದು ಭಾವಿಸುತ್ತೇನೆ'' ಎಂದು ಪತ್ರದ ಚಿತ್ರಗಳನ್ನು ಪೋಸ್ಟ್ ಮಾಡುವಾಗ ಯಾದವ್ ಟ್ವೀಟಿಸಿದರು.

  ಕುಂದುಕೊರತೆಗಳ ಪಟ್ಟಿಯ ಮೇಲ್ಭಾಗದಲ್ಲಿ 2015ರ ಚುನಾವಣೆಗೆ ಮುನ್ನ ಪ್ರಧಾನಿ ನೀಡಿರುವ ಭರವಸೆಗಳಾದ ಬಿಹಾರಕ್ಕೆ ವಿಶೇಷ ಸ್ಥಾನಮಾನ ಹಾಗೂ 1.25 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ನ್ನು ಪ್ರಸ್ತಾವಿಸಿದ್ದಾರೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನಿರಾಕರಿಸಲು ಕಾನೂನುಗಳನ್ನು ಎಷ್ಟು ಸಮಯದವರೆಗೆ ಬಳಸಲಾಗುವುದು?40 ಸಂಸದರಲ್ಲಿ 39 ಜನರನ್ನು ನಿಮಗೆ ನೀಡಿರುವ ರಾಜ್ಯಕ್ಕೆ ಈ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುವುದಿಲ್ಲವೇ? ಇತರ ವಿಷಯಗಳಲ್ಲಿ ನೀವು ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ದೀರಿ ಎಂದು ತೇಜಸ್ವಿ ಬರೆದಿದ್ದಾರೆ.

ಪಾಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸ್ಥಾನಮಾನ ನಿರಾಕರಣೆಯನ್ನು ಹಾಗೂ ಲಾಕ್‌ಡೌನ್ ಸಮಯದಲ್ಲಿ ಇತರ ರಾಜ್ಯಗಳಲ್ಲಿ ಬಿಹಾರದ ವಲಸೆ ಕಾರ್ಮಿಕರು ಎದುರಿಸಿದ್ದ ಸಮಸ್ಯೆಯನ್ನು ತೇಜಸ್ವಿ ಯಾದವ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News