"ಬಿಹಾರದಲ್ಲಿ ಜಂಗಲ್ ರಾಜ್ ತಂದವರಿಗೆ 'ಭಾರತ್ ಮಾತಾ ಕಿ ಜೈ', 'ಜೈ ಶ್ರೀ ರಾಮ್' ಹೇಳುವುದು ಇಷ್ಟವಾಗುವುದಿಲ್ಲ"

Update: 2020-11-03 11:32 GMT

ಪಾಟ್ನಾ: "ನೀವು ಭಾರತ್ ಮಾತಾ ಕಿ ಜೈ ಅಥವಾ ಜೈ ಶ್ರೀ ರಾಮ್ ಹೇಳಬಾರದೆಂದು ಬಯಸುವ ಜನರ ಗುಂಪೊಂದಿದೆ. ಅವರೆಲ್ಲಾ ಈಗ ಜತೆಯಾಗಿ ಬಿಹಾರದ ಜನರ ಮತಗಳನ್ನು ಕೇಳುತ್ತಿದ್ದಾರೆ. ಇಂತಹ ಜನರಿಗೆ ಬಿಹಾರ ಚುನಾವಣೆ ಸಂದರ್ಭ ತಕ್ಕ ಪ್ರತ್ಯುತ್ತರ ನೀಡಬೇಕಿದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವೆಂಬರ್ 7ರಂದು ಅಂತಿಮ ಹಂತದ ಮತದಾನ ನಡೆಯಲಿರುವ ಬಿಹಾರದ ಸಹಸ್ರಾದಲ್ಲಿ ಇಂದು ರ್ಯಾಲಿಯೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

"ಬಿಹಾರದ ಜನತೆ ರಾಜ್ಯದಲ್ಲಿ ಎನ್‍ಡಿಎ ಸರಕಾರ ರಚಿಸಲು ನಿರ್ಧರಿಸಿದ್ದಾರೆ,'' ಎಂದು ಹೇಳುವ ಮೂಲಕ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಜನರಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗಲು ಹೇಳಿದರಲ್ಲದೆ ಮೈಥಿಲಿ ಭಾಷೆಯಲ್ಲಿ ಕೆಲ ವಾಕ್ಯಗಳನ್ನು ಹೇಳಿದರು. "ಬಿಹಾರಕ್ಕೆ ಜಂಗಲ್ ರಾಜ್ ಮಾಡಿರುವ ದ್ರೋಹವನ್ನು ಪ್ರತಿಯೊಬ್ಬ ಬಿಹಾರ ನಾಗರಿಕ ಅರಿತಿದ್ದಾನೆ. ಸದಾ ಬಡವರ ಮಂತ್ರ ಜಪಿಸುತ್ತಿದ್ದವರು ಬಡವರನ್ನು ಚುನಾವಣೆಗಳಿಂದ ದೂರವಿರಿಸಿದ್ದಾರೆ. ಬಿಹಾರದ ಬಡ ಜನತೆಗೆ ತಮ್ಮದೇ ಸರಕಾರ ರಚಿಸುವ ಹಕ್ಕಿರಲಿಲ್ಲ.'' ಎಂದು ಪ್ರಧಾನಿ ಹೇಳಿದರು.

ಬಿಹಾರದ ಜನರು ಆತ್ಮನಿರ್ಭರ್ ಭಾರತ ಹಾಗೂ ಆತ್ಮನಿರ್ಭರ್ ಬಿಹಾರಕ್ಕೆ ಬದ್ಧರಾಗಿದ್ದಾರೆ ಎಂದೂ ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News