ಚುನಾವಣಾ ರ‍್ಯಾಲಿಯಲ್ಲಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆತ

Update: 2020-11-03 13:08 GMT

ಪಾಟ್ನಾ: ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಮಧುಬನಿ ಜಿಲ್ಲೆಯ ಹರ್ಲಖಿಯಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಉದ್ಯೋಗದ ಕುರಿತು ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ವೇದಿಕೆಯತ್ತ ಈರುಳ್ಳಿಗಳನ್ನು ಎಸೆದು ಕೂಗಾಡಿದ್ದಾನೆ.

ಸಿಎಂ ಹರ್ಲಖಿಯ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಸಿಎಂ ಮೇಲೆ ಈರುಳ್ಳಿ ಎಸೆದ ವ್ಯಕ್ತಿ, ರಾಜ್ಯದಲ್ಲಿ ಮದ್ಯ ಮಾರಾಟ ನಿರ್ಬಂಧಿಸಿದ್ದರೂ ಮದ್ಯವನ್ನು ಕಳ್ಳ ಸಾಗಣೆ ಮಾಡಲಾಗುತ್ತಿದೆ. ಅದನ್ನು ತಡೆಯುವಲ್ಲಿ ನಿಮ್ಮ ಸರಕಾರ ಯಶಸ್ವಿಯಾಗಲಿಲ್ಲ ಎಂದು ಕೂಗಾಡಿದ್ದ.

ನಿತೀಶ್ ಕುಮಾರ್ ಅವರ ಅಂಗರಕ್ಷಕರು ವ್ಯಕ್ತಿಯನ್ನು ತಡೆಯಲು ಮುಂದಾದರು. ಆಂತಕಕ್ಕೀಡಾದಂತೆ ಕಂಡು ಬಂದ ನಿತೀಶ್ ಆತ ಬಯಸಿದಷ್ಟು ಎಸೆಯಲು ಬಿಡಿ ಎಂದು ಅಂಗರಕ್ಷಕರಿಗೆ ಹೇಳಿದರು.

ನಿತೀಶ್ ರ್ಯಾಲಿಯಲ್ಲಿ ಈ ರೀತಿ ಆಗಿರುವುದು ಇದೇ ಮೊದಲಲ್ಲ. ಬಿಹಾರ ಚುನಾವಣಾ ರ್ಯಾಲಿಯಲ್ಲಿ ಈ ಹಿಂದೆ ಸಾಕಷ್ಟು ಬಾರಿ ಇಂತಹ ಪರಿಸ್ಥಿತಿಯನ್ನು ನಿತೀಶ್  ಎದುರಿಸಿದ್ದರು. ಕೆಲವು ರ್ಯಾಲಿಗಳಲ್ಲಿ ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಪರ ಘೋಷಣೆ ಕೂಗಿದ್ದಕ್ಕೆ ತಾಳ್ಮೆ ಕಳೆದುಕೊಂಡಿದ್ದ ನಿತೀಶ್ ಕುಮಾರ್ ಜನರ ಮೇಲೆ ರೇಗಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News