ಮಜಾ ಭಾರತ ಮತ್ತೆ ಶುರು

Update: 2020-11-05 07:49 GMT

ಈ ವರ್ಷವಿಡೀ ಮಜವಿರದ ರಜೆಯಲ್ಲೇ ಕಳೆದು ಹೋಗುತ್ತಿರುವಾಗ ಕಲರ್ಸ್ ಕನ್ನಡ ನಿಜವಾದ ಮಜವನ್ನ ಮತ್ತೆ ನಿಮ್ಮ ಬಳಿಗೆ ತರುತ್ತಿದೆ. ಜನ ಮೆಚ್ಚಿದ ಕಾಮಿಡಿ ಶೋ ಮಜಾ ಭಾರತ ಈ ಶನಿವಾರದಿಂದ ಮತ್ತೆ ಶುರುವಾಗುತ್ತಿದೆ. ಹಾಗಾಗಿ ಇನ್ನು ಮುಂದೆ ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 9 ಗಂಟೆಗೆ ನಗಲು ತಯಾರಾಗಿ.

ಕಷ್ಟಕಾಲದಲ್ಲಿ ನಮಗೆ ಬೇಕಾದದ್ದು ನಗುವೇ. ನೋವನ್ನು ಕಡಿಮೆ ಮಾಡೋದು ಅಳುವಿನಿಂದ ಆಗದು. ನಮ್ಮೆಲ್ಲ ನೋವುಗಳಿಗೂ ನಗುವೇ ದಿವ್ಯ ಔಷಧಿ. ಅಂಥ ನಗುವನ್ನು ಯಾವ ಮಾಸ್ಕೂ ಮರೆಮಾಡಲಾಗದು. ಇದೇ ನಂಬಿಕೆಯೊಂದಿಗೆ ಮಜಾಭಾರತ ತಂಡ ಸಜ್ಜಾಗಿದೆ. ಮನೆಮಂದಿ ಯನ್ನೆಲ್ಲಾ ನಗಿಸಿಯೇ ತೀರುವ ಉತ್ಸಾಹದಲ್ಲಿದೆ. ಅದರ ಹೊಸ ಉತ್ಸಾಹಕ್ಕೆ ಕಾರಣಗಳೂ ಇವೆ. 

ಎಂದಿನಂತೆ ಬಿದ್ದು ಬಿದ್ದು ನಗಿಸುವ ಸ್ಕಿಟ್ಟುಗಳಂತೂ ಈ ಸೀಸನ್ನಲ್ಲೂ ಇರುತ್ತವೆ. ಆದರೆ ಅದರ ಜೊತೆಗೆ ಈ ಸಲ ಕೆಲವು ಹೊಸ ಆಕರ್ಷಣೆಗಳೂ ಸೇರಿಕೊಂಡಿವೆ. ಹಾಗಾಗಿ ವೀಕ್ಷಕರಿಗೆ ಹೊಸದೊಂದು ಅನುಭವ ಕೊಡಲು ತವಕಿಸುತ್ತಿದೆ ಮಜಾಭಾರತ ತಂಡ. ಇಬ್ಬರು ಹೊಸ ಅತಿಥಿಗಳು ಸೇರ್ಪಡೆಯಾಗಿರುವುದು ಈ ಸೀಸನ್ನಿನ ವಿಶೇಷ. ಬಿಗ್ ಬಾಸ್ ಕಾರ್ಯಕ್ರಮದಿಂದ ನಿಮ್ಮ ಮನೆಹುಡುಗಿಯೇ ಆಗಿರುವ ಭೂಮಿ ಶೆಟ್ಟಿಗೆ ಇಲ್ಲಿ ಹೊಸ ಪಾತ್ರ. ಕಾರ್ಯಕ್ರಮದ ನಿರೂಪಕಿಯಾಗಿ ಭೂಮಿ ನಿಮ್ಮನ್ನ ರಂಜಿಸಲಿದ್ದಾರೆ. ಅವರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಥರಥರದ ಪಾತ್ರಗಳಿಂದ ನಿಮ್ಮನ್ನ ನಗಿಸಿ ಮನಸೂರೆಗೊಂಡಿದ್ದ ಶೇಷಪ್ಪ ಅಲಿಯಾಸ್ ಹರೀಶ್ ರಾಜ್ ಈ ಸಲದ ಮಜಾಭಾರತದಲ್ಲಿ ಪ್ರತಿ ವಾರವೂ ಒಂದು ಹೊಸ ಪಾತ್ರವಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಈಗಾಗಲೇ ನಗೆಯಿಂದ ತುಂಬಿರುವ ಮಜಾಮನೆಗೆ ಮತ್ತಷ್ಟು ರಂಗೇರಿಸಲಿದ್ದಾರೆ.

ಹೊಸದೆಷ್ಟೇ ಸೇರಿಕೊಂಡರೂ ಮಜಾ ಭಾರತದ ಮುಖ್ಯ ಆಕರ್ಷಣೆಗಳೆಂದರೆ ರಚಿತಾ ರಾಮ್ ನಗು ಮತ್ತು ಗುರುಕಿರಣ್ ಮಾತು. ಅವರೆಡೂ ಈ ಸೀಸನ್ನಲ್ಲೂ ಇರುತ್ತವೆ. ಜೊತೆಗೆ ಗುರುಕಿರಣ್ ಈ ಸಲ ಹೊಸದೊಂದು ಸರ್ಪ್ರೈಸ್ ಹೊತ್ತು ತರುತ್ತಿದ್ದಾರೆ. ಅದನ್ನ ನೀವು ಶೋನಲ್ಲೇ ನೋಡಬೇಕು.

ಒಟ್ಟಾರೆ  ಇಷ್ಟು ಸೀಸನ್ನುಗಳ ಮಜಾಕ್ಕೆ ಈ ಸಲ ಬೋನಸ್ ಆಗಿ ಮತ್ತಷ್ಟು ಮಜಾ ಸೇರಿಕೊಂಡಂತಾಗಿದೆ. ಅಂದರೆ ಮಜವೋ ಮಜ. ಇಷ್ಟೆಲ್ಲಾ ಹೊಸತುಗಳಿದ್ದಮೇಲೆ ಕಾರ್ಯಕ್ರಮದ ರೂಪವೂ ಹೊಸದಾಗಿರಲೇಬೇಕಲ್ಲವೆ? ಏನೇನು ಹೊಸದಾಗಿದೆ ಎಂಬ ಕುತೂಹಲ ತಣಿಯಬೇಕೆಂದರೆ ಶನಿವಾರ ರಾತ್ರಿ ಒಂಬತ್ತಕ್ಕೆ ಕಲರ್ಸ್ ಕನ್ನಡ ಚಾನೆಲ್ ಒತ್ತಲು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News