×
Ad

ಆ್ಯಂಬುಲೆನ್ಸ್ ಗೆ ದಾರಿ ಮಾಡಿ ಕೊಡಲು ಎರಡು ಕಿ.ಮೀ. ದೂರ ಓಡಿದ ಟ್ರಾಫಿಕ್ ಪೊಲೀಸ್‍ಗೆ ವ್ಯಾಪಕ ಶ್ಲಾಘನೆ

Update: 2020-11-05 17:57 IST

ಹೈದರಾಬಾದ್: ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ಹಾದಿ ಸುಗಮವಾಗಿಸುವ ಉದ್ದೇಶದಿಂದ ಹೈದರಾಬಾದ್ ನಗರದ ವಾಹನ ದಟ್ಟಣೆಯಿರುವ ರಸ್ತೆಗಳುದ್ದಕ್ಕೂ ಸುಮಾರು ಎರಡು ಕಿಮೀ ದೂರದಷ್ಟು ಓಡಿದ  ಟ್ರಾಫಿಕ್ ಕಾನ್‍ಸ್ಟೇಬಲ್ ಒಬ್ಬರು ಸಾಮಾಜಿಕ ಜಾಲತಾಣಿಗರ ಹೃದಯ ಗೆದ್ದಿದ್ದಾರೆ.

ಸೋಮವಾರ ನಗರದ ಅಬಿದ್ಸ್ ಪ್ರದೇಶದಿಂದ ಕೋಟಿ ಪ್ರದೇಶದತ್ತ ಅಂಬ್ಯುಲೆನ್ಸ್ ಸಾಗುತ್ತಿದ್ದಾಗ ಅದು ಟ್ರಾಫಿಕ್ ಸಮಸ್ಯೆಯಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿದ ಕಾನ್‍ಸ್ಟೇಬಲ್ ಜಿ ಬಾಬ್ಜಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಅವರು ಅಂಬ್ಯುಲೆನ್ಸ್ ಮುಂದೆ ಓಡುತ್ತಿರುವ ವೀಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರಾಫಿಕ್ ಕಾನ್ಸಸ್ಟೇಬಲ್ ಅವರ ಕಾರ್ಯವನ್ನು ಶ್ಲಾಘಿಸಿ  ಹೈದರಾಬಾದ್‍ನ ಎಸಿಪಿ (ಟ್ರಾಫಿಕ್) ಅನಿಲ್ ಕುಮಾರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News