ಇಸ್ರೋದಿಂದ ಉಪಗ್ರಹ ಯಶಸ್ವಿ ಉಡಾವಣೆ

Update: 2020-11-07 10:55 GMT

 ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಇಂದು ಪಿಎಸ್‌ಎಲ್‌ವಿ ಸರಣಿಯ 51ನೇ ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಪಿಎಸ್‌ಎಲ್‌ವಿ ಸಿ-49 ಉಪಗ್ರಹವಾಹಕವು ಕೃಷಿ, ಅರಣ್ಯ ಹಾಗೂ ವಿಪತ್ತು ನಿರ್ವಹಣೆಯ ಉದ್ದೇಶಿತ ಇಒಎಸ್-01 ಹಾಗೂ 9 ಗ್ರಾಹಕ ಉಪಗ್ರಹಗಳನ್ನು ಹೊತ್ತು ಸಾಗಿದೆ ಎಂದು ಇಸ್ರೋ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.
 
ಮಾರ್ಚ್ 23 ರಂದು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಇದು ಬಾಹ್ಯಾಕಾಶ ಏಜೆನ್ಸಿಯ ಮೊದಲ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 3:12ರ ವೇಳೆಗೆ ಉಪಗ್ರಹ ಉಡಾವಣೆ ಮಾಡಲಾಗಿದ್ದು, ಇದು ಇಸ್ರೋ ಈ ವರ್ಷ ಕೈಗೊಂಡ ಮೊದಲ ಯೋಜನೆಯಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News