ಅಮೆರಿಕ ಚುನಾವಣೆ: 50ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಗೆಲುವು
Update: 2020-11-08 13:22 IST
ನ್ಯೂಯಾರ್ಕ್: ಅಮೆರಿಕದ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುಸ್ಲಿಂ ಅಮೆರಿಕನ್ ಅಭ್ಯರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ತಮ್ಮ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ಮೂರು ಮುಸ್ಲಿಂ ವಕಾಲತ್ತು ಗುಂಪುಗಳು ಶುಕ್ರವಾರ ತಿಳಿಸಿದೆ.
ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿದ್ದ್ದ 110 ಮುಸ್ಲಿಂ-ಅಮೆರಿಕನ್ನರ ಪೈಕಿ 57 ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ ಎಂದು ಅಮೆರಿಕನ್ -ಇಸ್ಲಾಮಿಕ್ ರಿಲೇಶನ್ಸ್(ಸಿಎಐಆರ್), ಜೆಟ್ಪಾಕ್ ಹಾಗೂ ಎಂಪವರ್ ಚೇಂಜ್ ಹೇಳಿವೆ.
24 ರಾಜ್ಯಗಳು ಹಾಗೂ ವಾಷಿಂಗ್ಟನ್, ಡಿಸಿಗಳಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆಯು 2016ಕ್ಕಿಂತ ಅತ್ಯಧಿಕವಾಗಿದೆ.
57 ವಿಜೇತರಲ್ಲಿ ಏಳು ಅಭ್ಯರ್ಥಿಗಳು ತಮ್ಮ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಮುಸ್ಲಿಮರಾಗಿ ಇತಿಹಾಸ ನಿರ್ಮಿಸಿದರು.
ಯುನೈಟೆಡ್ ಸ್ಟೇಟ್ಸ್ ಹೌಸ್ ರೆಪ್ರೆಸೆಂಟೇಟಿವ್ಸ್ 435 ಸ್ಥಾನಗಳನ್ನು ಹಾಗೂ ಸೆನೆಟ್ 100 ಸ್ಥಾನಗಳನ್ನು ಹೊಂದಿದೆ ಎಂಬುದು ಗಮನಾರ್ಹವಾಗಿದೆ.