×
Ad

ನಾನು ಅಧ್ಯಕ್ಷನಾಗಿರುತ್ತೇನೋ ಇಲ್ಲವೋ ಕಾಲವೇ ಹೇಳಲಿದೆ ಎಂದ ಟ್ರಂಪ್

Update: 2020-11-14 21:50 IST

ವಾಶಿಂಗ್ಟನ್, ನ. 14: ನಾನು ಅಧ್ಯಕ್ಷನಾಗಿ ಉಳಿಯುತ್ತೇನೋ ಇಲ್ಲವೋ ಎನ್ನುವುದನ್ನು ಕಾಲವೇ ಹೇಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಗೆಲುವು ಸಾಧಿಸಿರುವುದನ್ನು ಸ್ವೀಕರಿಸಲು ನಿರಾಕರಿಸುವ ಅಭೂತಪೂರ್ವ ನಿರ್ಧಾರವೊಂದನ್ನು ತೆಗೆದುಕೊಂಡ ಬಳಿಕ, ಅದರಿಂದ ಹಿಂದೆ ಸರಿಯುತ್ತಿರುವುದನ್ನು ಅವರ ಈ ಹೇಳಿಕೆ ತೋರಿಸುತ್ತದೆ ಎಂಬುದಾಗಿ ಭಾವಿಸಲಾಗಿದೆ.

ಒಂದು ವಾರ ಕ್ಯಾಮರಗಳ ಮುಂದೆ ಹಾಜರಾಗದ ಟ್ರಂಪ್ ಶುಕ್ರವಾರ ಕೊರೋನ ವೈರಸ್ ಲಸಿಕೆಗೆ ಅಂಗೀಕಾರ ನೀಡುವುದಕ್ಕಾಗಿ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ಕಿರು ಸಮಾರಂಭದಲ್ಲಿ ಭಾಗವಹಿಸಿದ ವೇಳೆ ಈ ಹೇಳಿಕೆ ನೀಡಿದ್ದಾರೆ.

ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಯಲು ಇನ್ನು ಮುಂದೆ ನಾನು ಲಾಕ್‌ಡೌನ್ ಘೋಷಣೆ ಮಾಡುವುದಿಲ್ಲ ಎಂದು ಅವರು ಹೇಳಿದರು.

‘‘ಮುಂದೇನಾಗುತ್ತದೆಯೋ ಯಾರಿಗೆ ಗೊತ್ತು, ಯಾವ ಸರಕಾರವಿರುತ್ತದೋ, ಕಾಲವೇ ನಿರ್ಧರಿಸಲಿದೆ’’ ಎಂದು ತನ್ನ ಭಾಷಣದ ವೇಳೆ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News