ನನ್ನ ಪುತ್ರ ಭಾರತದಲ್ಲಿ ಗಾಯಕನಾಗುವುದು ನನಗೆ ಇಷ್ಟವಿಲ್ಲ: ಸೋನು ನಿಗಮ್

Update: 2020-11-15 15:22 GMT

ಹೊಸದಿಲ್ಲಿ: ತನ್ನ ಪುತ್ರ ಭಾರತದಲ್ಲಿ ಗಾಯಕನಾಗುವುದು ತನಗೆ ಇಷ್ಟವಿಲ್ಲ ಎಂದು ಬಹುಭಾಷಾ ಗಾಯಕ ಸೋನು ನಿಗಮ್ ಹೇಳಿದ್ದಾರೆ ಎಂದು  timesnownews.com ವರದಿ ಮಾಡಿದೆ.

ಹಿಂದಿ, ಕನ್ನಡ, ತಮಿಳು, ಬoಗಾಳಿ, ಗುಜರಾತಿ ಭಾಷೆಗಳಲ್ಲಿ ಪ್ರಸಿದ್ಧರಾಗಿರುವ ಸೋನು ನಿಗಮ್ ತಮ್ಮ ಹೊಸ ಆಲ್ಬಂ ‘ಈಶ್ವರ್ ಕ ವೊ ಸಚ್ಚಾ ಬಂದಾ’ದ ಪ್ರೊಮೋಶನ್ ಕಾರ್ಯಕ್ರಮಕ್ಕಾಗಿ ಮುಂಬೈಗೆ ಆಗಮಿಸಿದ್ದರು. ಸದ್ಯ ಅವರು ದುಬೈಯಲ್ಲಿ ನೆಲೆಸಿದ್ದಾರೆ.

ತಮ್ಮ ಪುತ್ರ ನೀವನ್ ಗಾಯಕನಾಗುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋನು ನಿಗಮ್, “ನಿಜವಾಗಿ ಹೇಳಬೇಕೆಂದರೆ ಅವನು ಗಾಯಕನಾಗುವುದು ನನಗಿಷ್ಟವಿಲ್ಲ, ಕನಿಷ್ಟ ಈ ದೇಶದಲ್ಲಿ ಅವನು ಗಾಯಕನಾಗುವುದು ಇಷ್ಟವಿಲ್ಲ. ಆತ ಈಗ ಭಾರತದಲ್ಲಿ ವಾಸಿಸುತ್ತಿಲ್ಲ, ಅವನೀಗ ದುಬೈಯಲ್ಲಿದ್ದಾನೆ. ನಾನು ಈಗಾಗಲೇ ಅವನನ್ನು ಭಾರತದಿಂದ ಹೊರಗೆ ಕರೆದುಕೊಂಡು ಹೋಗಿದ್ದೇನೆ. ಅವನು ಹುಟ್ಟುತ್ತಲೇ ಗಾಯಕ ಮತ್ತು ಆತನಿಗೆ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿಯಿದೆ. ಸದ್ಯ ಅವನು ಯುಎಇಯಲ್ಲಿ ಅಗ್ರ ಗೇಮರ್ ಗಳಲ್ಲಿ ಒಬ್ಬ. ಫೋರ್ಟ್ ನೈಟ್ ಗೇಮ್ ನಲ್ಲಿ 2ನೆ ಟಾಪರ್” ಎಂದಿದ್ದಾರೆ ಎಂದು timesnownews.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News