'ಲವ್ ಜಿಹಾದ್' ನಿಯಂತ್ರಣಕ್ಕೆ ಸದ್ಯದಲ್ಲಿಯೇ ಕಾನೂನು ಜಾರಿ, ತಪ್ಪಿತಸ್ಥರಿಗೆ 5 ವರ್ಷ ಸಜೆ: ಮಧ್ಯ ಪ್ರದೇಶ ಗೃಹ ಸಚಿವ

Update: 2020-11-17 09:02 GMT
ನರೋತ್ತಮ್ ಮಿಶ್ರಾ (Photo: ANI)

ಭೋಪಾಲ್: 'ಲವ್ ಜಿಹಾದ್' ನಿಯಂತ್ರಿಸಲು ತಮ್ಮ ಸರಕಾರ ಸದ್ಯದಲ್ಲಿಯೇ ಕಾನೂನು ಜಾರಿಗೊಳಿಸಲಿದೆ ಹಾಗೂ ತಪ್ಪಿತಸ್ಥರಿಗೆ 5 ವರ್ಷ ತನಕ ಕಠಿಣ ಸಜೆ ವಿಧಿಸಲಾಗುವುದು ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. 'ಲವ್ ಜಿಹಾದ್' ನಿಯಂತ್ರಣಕ್ಕೆ ಕಾನೂನು ಜಾರಿಗೊಳಿಸುವ  ಕುರಿತು ಪರಿಶೀಲಿಸುವುದಾಗಿ ಕರ್ನಾಟಕ ಮತ್ತು ಹರ್ಯಾಣ ಸರಕಾರಗಳು ಹೇಳಿರುವ ಬೆನ್ನಿಗೇ ಮಧ್ಯ ಪ್ರದೇಶ ಸಚಿವರ ಹೇಳಿಕೆ ಬಂದಿದೆ.

ಈ ಕುರಿತಾದ ಮಸೂದೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದ ಅವರು "ಜಾಮೀನುರಹಿತ ಸೆಕ್ಷನ್‍ಗಳ ಅಡಿಯಲ್ಲಿ  ಪ್ರಕರಣ ದಾಖಲಿಸಲಾಗುವುದು ಹಾಗೂ  ಈ ಪ್ರಕರಣಗಳಲ್ಲಿ ಸಹಕರಿಸಿದವರನ್ನೂ ಪ್ರಮುಖ ಆರೋಪಿಗಳನ್ನಾಗಿಸಲಾಗುವುದು, ವಿವಾಹ ಉದ್ದೇಶದ ಸ್ವಯಂಪ್ರೇರಿತ ಮತಾಂತರಕ್ಕಾಗಿ ಕಲೆಕ್ಟರ್ ಬಳಿ ಒಂದು ತಿಂಗಳು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಲಿದೆ,'' ಎಂದು ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News