ಜಾರ್ಜಿಯದಲ್ಲಿ ಮರು ಮತ ಎಣಿಕೆ ಸಂಪೂರ್ಣ; ಬೈಡನ್ ಜಯ ದೃಢ

Update: 2020-11-20 18:19 GMT

ವಾಶಿಂಗ್ಟನ್, ನ. 20: ಅವೆುರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜಿಯ ರಾಜ್ಯದಲ್ಲಿ ಚಲಾವಣೆಯಾಗಿರುವ ಎಲ್ಲ ಮತಗಳನ್ನು ಕೈಯಿಂದ ಮರು ಎಣಿಕೆ ಮಾಡುವ ಪ್ರಕ್ರಿಯೆ ಸಂಪೂರ್ಣಗೊಂಡಿದೆ ಹಾಗೂ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆದ್ದಿರುವುದು ದೃಢಪಟ್ಟಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಗುರುವಾರ ಘೋಷಿಸಿದ್ದಾರೆ.

 ‘‘ಮೂಲತಃ ಯಂತ್ರದ ಮೂಲಕ ನಡೆಸಲಾದ ಮತ ಎಣಿಕೆಯು ಚುನಾವಣೆಯ ವಿಜಯಿಯನ್ನು ನಿಖರವಾಗಿ ಬಿಂಬಿಸಿದೆ ಎನ್ನುವುದನ್ನು ಮರು ಮತ ಎಣಿಕೆಯು ಖಚಿತಪಡಿಸಿದೆ’’ ಎಂದು ಜಾರ್ಜಿಯದ ಹೊರ ರಾಜ್ಯಗಳ ವ್ಯವಹಾರದ ಕಾರ್ಯದರ್ಶಿ ಬ್ರಾಡ್ ರ್ಯಾಫನ್‌ಸ್ಪರ್ಜರ್‌ರ ವೆಬ್‌ಸೈಟ್‌ನಲ್ಲಿ ಹಾಕಲಾದ ಹೇಳಿಕೆಯೊಂದು ತಿಳಿಸಿದೆ.

ಈ ಮೂಲಕ, ಜೋ ಬೈಡನ್ ದಕ್ಷಿಣ ಅಮೆರಿಕದ ರಾಜ್ಯ ಜಾರ್ಜಿಯದಲ್ಲಿ ಮೂರು ದಶಕಗಳ ಅವಧಿಯಲ್ಲಿ ಗೆದ್ದ ಮೊದಲ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News