ಕಾಮಿಡಿಯನ್ ಭಾರತಿ ಸಿಂಗ್ ರನ್ನು ಬಂಧಿಸಿದ ಎನ್ ಸಿಬಿ

Update: 2020-11-21 14:55 GMT

ಮುಂಬೈ: ಮಾದಕವಸ್ತು ನಿಯಂತ್ರಣ ಘಟಕ( ಎನ್ ಸಿಬಿ)ಕಾಮಿಡಿಯನ್ ಭಾರತಿ ಸಿಂಗ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸಿದೆ.

ಇಂದು ಬೆಳಗ್ಗೆ ಭಾರತಿ ಸಿಂಗ್ ಮನೆ ಹಾಗೂ ಕಚೇರಿ ಮೇಲೆ ಎನ್ ಸಿಬಿ ದಾಳಿ ನಡೆಸಿದ್ದಾಗ 86.6 ಗ್ರಾಮ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಆ ನಂತರ ಭಾರತಿ ಹಾಗೂ ಅವರ ಪತಿ ಹರ್ಷ್ ಲಿಂಬಚಿಯಾರನ್ನು ಎನ್ ಸಿಬಿಯ ಮುಂಬೈ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು.

ಭಾರತಿ ಹಾಗೂ ಅವರ ಪತಿ ಗಾಂಜಾ ಸೇವನೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಭಾರತಿ ಪತಿಯ ವಿಚಾರಣೆ ಮುಂದುವರಿದಿದೆ ಎಂದು ಎನ್ ಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News