ಈ ರಾಜ್ಯದಲ್ಲಿ ಅಂತರ್‌ಜಾತಿ, ಅಂತರ್‌ಧರ್ಮ ವಿವಾಹಕ್ಕೆ ಸಿಗಲಿದೆ 50 ಸಾವಿರ ರೂ. ಕೊಡುಗೆ

Update: 2020-11-21 15:34 GMT

ಡೆಹ್ರಾಡೂನ್, ನ. 21: ದೇಶಾದ್ಯಂತ ‘ಲವ್ ಜಿಹಾದ್’ ಆರೋಪ ಕೇಳಿ ಬರುತ್ತಿರುವ ನಡುವೆ ಅಂತರ್ ಧರ್ಮ ಹಾಗೂ ಅಂತರ್‌ಜಾತಿ ವಿವಾಹವಾದ ದಂಪತಿಗೆ ಉತ್ತೇಜಕವಾಗಿ 50 ಸಾವಿರ ರೂಪಾಯಿ ನೀಡುವುದಾಗಿ ಎಂದು ಉತ್ತರಾಖಂಡ ಸರಕಾರ ಘೋಷಿಸಿದೆ.

ಅಂತರ್‌ಜಾತಿ ಹಾಗೂ ಅಂತರ್‌ಧರ್ಮ ವಿವಾಹವನ್ನು ಕಾನೂನು ಬದ್ಧವಾಗಿ ನೋಂದಾಯಿಸಿದ ದಂಪತಿಗೆ ಈ ನಗದು ಉತ್ತೇಜಕಗಳನ್ನು ನೀಡಲಾಗುವುದು ಎಂದು ರಾಜ್ಯದ ಸಾಮಾಜಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಅಂತರ್‌ಜಾತಿ ವಿವಾಹವಾದ ದಂಪತಿ ಈ ಉತ್ತೇಜಕಗಳನ್ನು ಪಡೆಯಬೇಕಾದರೆ, ಸಂವಿಧಾನದಲ್ಲಿ ವ್ಯಾಖ್ಯಾನಿಸಿದಂತೆ ಪತಿ ಅಥವಾ ಪತ್ನಿ ಪರಿಶಿಷ್ಟ ಜಾತಿಗೆ ಸೇರಿರಬೇಕು ಎಂದು ಅವರು ತಿಳಿಸಿದ್ದಾರೆ.

ಅಂತರ್ ಜಾತಿ ಹಾಗೂ ಅಂತರ್ ಧರ್ಮ ವಿವಾಹಕ್ಕೆ ಈ ನಗದು ನೀಡುವುದು ದೇಶದ ಏಕತೆಯನ್ನು ಪ್ರೇರೇಪಿಸಲು ನೆರವಾಗಲಿದೆ ಎಂದು ತೆಹ್ರಿಯ ಸಾಮಾಜಿಕ ಕಲ್ಯಾಣ ಇಲಾಖೆ ಅಧಿಕಾರಿ ದೀಪಂಕರ್ ಗಿಲ್ದಿಯಾ ತಿಳಿಸಿದ್ದಾರೆ.

ಅರ್ಹ ದಂಪತಿ ವಿವಾಹವಾದ ಒಂದು ವರ್ಷದ ಒಳಗೆ ಈ ನಗದು ಉತ್ತೇಜಕಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News