ಐಎಸ್ ಎಲ್: ನಾರ್ತ್ ಈಸ್ಟ್ ಯುನೈಟೆಡ್ ವಿರುದ್ದ ಮುಗ್ಗರಿಸಿದ ಮುಂಬೈ ಸಿಟಿ

Update: 2020-11-21 16:57 GMT

ಪಣಜಿ: ಅಮೋಘ ಪ್ರದರ್ಶನ ನೀಡಿದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ವಿರುದ್ಧ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್)ಎರಡನೇ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಮುಂಬೈ ವಿರುದ್ಧ ಅಪರೂಪದ ಗೆಲುವು ತನ್ನದಾಗಿಸಿಕೊಂಡಿದೆ.

ವಾಸ್ಕೋದ ತಿಲಕ್ ಮೈದಾನ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಸಿಟಿ ತಂಡ ಉತ್ತಮ ಆರಂಭ ಹಾಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹೊರತಾಗಿಯೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕ್ವಾಸಿ ಅಪ್ಪಿಯ್ಹಾ 49ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ನಾರ್ತ್ ಈಸ್ಟ್ ಯುನೈಟೆಡ್  ಗೆ ಮುನ್ನಡೆ ಒದಗಿಸಿಕೊಟ್ಟರು.

ಕೊನೆಯ ತನಕ ಮುನ್ನಡೆಯನ್ನು ಉಳಿಸಿಕೊಂಡ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ವಿರುದ್ಧ ಐಎಸ್ ಎಲ್ ನಲ್ಲಿ ಆಡಿರುವ 13ನೇ ಪಂದ್ಯದಲ್ಲಿ 4ನೇ ಗೆಲುವು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News