ವರವರ ರಾವ್ ಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿ ಅಪೀಲು ಸಲ್ಲಿಸಿದ 60 ಐರಿಷ್ ಸಾಹಿತಿಗಳು

Update: 2020-11-23 11:44 GMT

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 2018ರಿಂದ ಬಂಧನದಲ್ಲಿರುವ ಹಿರಿಯ ತೆಲುಗು ಕವಿ ವರವರ ರಾವ್ ಅವರ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿ ಡಬ್ಲಿನ್‍ನಲ್ಲಿರುವ ಭಾರತೀಯ ದೂತಾವಾಸಕ್ಕೆ ಸುಮಾರು 60 ಮಂದಿ ಐರಿಷ್ ಸಾಹಿತಿಗಳು ಅಪೀಲು ಸಲ್ಲಿಸಿದ್ದಾರೆ. ಎಂಬತ್ತು ವರ್ಷದ ವರವರ ರಾವ್ ಅವರ ಕ್ಷೀಣಿಸುತ್ತಿರುವ ಆರೋಗ್ಯವನ್ನು ಪರಿಗಣಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಕಳೆದ ವಾರ ಬಾಂಬೆ ಹೈಕೋರ್ಟ್  ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

"ಯಾವುದೇ ವಿಚಾರಣೆ ನಡೆಸದೆ ಬಂಧನದಲ್ಲಿರುವ ವರವರ ರಾವ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಕುರಿತು ನಮಗೆ ಕಳವಳವಿದೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಹಾಗೂ  ಭಾರತದಲ್ಲಿ ಅಧಿಕಾರದಲ್ಲಿರುವವರಿಗೆ ನಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದೇವೆ. ಒಬ್ಬ ಕವಿಯನ್ನು ಈ ರೀತಿ- ಮೂರು ತಿಂಗಳ ಕಾಲ ಕೆಥಟರ್ ಬದಲಾಯಿಸದೆ ಇರಿಸಿರುವಾಗ, ನಮಗೆ ಆಕ್ರೋಶ ವ್ಯಕ್ತಪಡಿಸದೆ ಬೇರೆ ದಾರಿಯಿಲ್ಲ,'' ಎಂದು ಐರಿಷ್ ಬರಹಗಾರರು ತಮ್ಮ ಅಪೀಲಿನಲ್ಲಿ ಹೇಳಿದ್ದಾರಲ್ಲದೆ ವರವರ ರಾವ್ ಅವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ಕುರಿತೂ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News