‘ಲವ್ ಜಿಹಾದ್’ವಿರುದ್ಧ ಕಾನೂನು: ಉ.ಪ್ರ. ಸರಕಾರಕ್ಕೆ ಉರ್ದು ಕವಿಯ ತರಾಟೆ

Update: 2020-11-23 14:52 GMT
Photo: twitter.com/munawwarrana

ಲಕ್ನೋ,ನ.23: ‘ಲವ್ ಜಿಹಾದ್’ವಿರುದ್ಧ ಕಾನೂನನ್ನು ತರಲು ಮುಂದಾಗಿರುವ ಉತ್ತರ ಪ್ರದೇಶ ಸರಕಾರದ ವಿರುದ್ಧ ಸೋಮವಾರ ದಾಳಿ ನಡೆಸಿದ ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಅವರು, ನೂತನ ಕಾನೂನನ್ನು ತಮ್ಮ ಸಮುದಾಯದ ಹೊರಗೆ ಮದುವೆಯಾಗಿರುವ ಬಿಜೆಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮೊದಲು ಬಳಸಬೇಕು ಎಂದು ಅಣಕವಾಡಿದ್ದಾರೆ.

‘ಕೇಂದ್ರದಲ್ಲಿ ಕುಳಿತಿರುವ ಇಬ್ಬರು ‘ದೊಡ್ಡ ಲವ್ ಜಿಹಾದಿ ’ಗಳನ್ನು ಇಬ್ಬರು ಮುಸ್ಲಿಂ ಮಹಿಳೆಯರು ಮದುವೆಯಾಗುವಂತಾಗಲು ಅವರಿಂದಲೇ ಕಾನೂನಿನ ಬಳಕೆಯನ್ನು ಆರಂಭಿಸಬೇಕು ಮತ್ತು ತಮ್ಮ ಧರ್ಮದ ಹೊರಗೆ ಮದುವೆಯಾಗಿರುವ ಎಲ್ಲ ಬಿಜೆಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಷರತ್ತಿನ ಮೇಲೆ ನೂತನ ಕಾನೂನನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ ’ಎಂದು ರಾಣಾ ಟ್ವೀಟಿಸಿದ್ದಾರೆ.

‘ಲವ್ ಜಿಹಾದ್ ’ಎನ್ನುವುದು ಸಮಾಜದಲ್ಲಿ ದ್ವೇಷವನ್ನು ಹರಡಲು ಬಳಕೆಯಾಗುತ್ತಿರುವ ಅರ್ಥಹೀನ ಶಬ್ದವಾಗಿದ್ದರೂ ಇದರಿಂದ ಮುಸ್ಲಿಂ ಯುವತಿಯರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ,ಏಕೆಂದರೆ ಸಮುದಾಯದ ಯುವಕರು ಹೊರಗಿನ ಯುವತಿಯರನ್ನು ಮದುವೆಯಾಗುತ್ತಿದ್ದಾರೆ ಎಂದೂ ಅವರು ಟ್ವೀಟಿಸಿದ್ದಾರೆ.

ಇತ್ತೀಚಿಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಾಣಾ,ಪ್ರವಾದಿ ಮುಹಮ್ಮದ್ (ಸ.ಅ) ಅವರ ರೇಖಾಚಿತ್ರವನ್ನು ಬಿಡಿಸಿದ್ದಕ್ಕಾಗಿ ಫ್ರಾನ್ಸ್‌ನಲ್ಲಿ ನಡೆದಿದ್ದ ಮೂವರ ಹತ್ಯೆಗಳನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News