43 ಮೊಬೈಲ್ ಆ್ಯಪ್ ಗಳನ್ನು ನಿರ್ಬಂಧಿಸಿದ ಕೇಂದ್ರ ಸರಕಾರ

Update: 2020-11-24 18:19 GMT

ಹೊಸದಿಲ್ಲಿ:ಕೇಂದ್ರ ಸರಕಾರ ರಕ್ಷಣೆ ಹಾಗೂ ಭದ್ರತೆಯ ಕಾಳಜಿಯನ್ನು ಮುಂದಿಟ್ಟುಕೊಂಡು  ಒಟ್ಟು 43 ಮೊಬೈಲ್ ಆ್ಯಪ್ ಗಳನ್ನು ನಿರ್ಬಂಧಿಸಿದೆ. ಹೊಸದಾಗಿ ನಿಷೇಧಿಸಲಾಗಿರುವ ಅಪ್ಲಿಕೇಶನ್ ಗಳಲ್ಲಿ ಚೀನಾ ಕಂಪೆನಿಗಳ ಒಡೆತನದ ಹಲವಾರು ಆ್ಯಪ್ ಗಳು ಸೇರಿವೆ.  ಅವುಗಳಲ್ಲಿ ನಾಲ್ಕು ಚೀನಾದ ದೈತ್ಯ ಕಂಪೆನಿ ಅಲಿಬಾಬಾ ಗ್ರೂಪ್ ಒಡೆತನದಲ್ಲಿದೆ.

ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆಯ ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ಈ 43 ಮೊಬೈಲ್ ಆ್ಯಪ್ ಗಳು ತೊಡಗಿಸಿಕೊಂಡ ಬಗ್ಗೆ ದೊರೆತ ಮಾಹಿತಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು  ಕೇಂದ್ರ ಸರಕಾರವು ತಿಳಿಸಿದೆ.

43 ಮೊಬೈಲ್ ಅಪ್ಲಿಕೇಶನ್ ಗಳಿಗೆ ಪ್ರವೇಶವನ್ನು ನಿರ್ಬಂಧಿಸುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಭಾರತ ಸರಕಾರದ ಎಲೆಕ್ಟ್ರಾನಿಕ್ಸ್  ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ ಎಂದು ಸರಕಾರದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News