ನಕಲಿ ಟಿಆರ್‌ಪಿ ಹಗರಣ: ಆರೋಪಪಟ್ಟಿ ದಾಖಲು

Update: 2020-11-24 15:30 GMT

ಮುಂಬೈ, ನ.24: ಟಿವಿ ವಾಹಿನಿಗಳ ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿ ಮುಂಬೈಯ ಪೊಲೀಸರು ಮಂಗಳವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಕಲಿ ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಇಂಟಲಿಜೆನ್ಸ್ ಯುನಿಟ್ (ಸಿಐಯು) ಆರೋಪಪಟ್ಟಿ ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ರಿಪಬ್ಲಿಕ್ ಟಿವಿ ಪ್ರಸರಣ ವಿಭಾಗದ ಮುಖ್ಯಸ್ಥ, ಎರಡು ಚಾನೆಲ್‌ಗಳ ಮಾಲಕರ ಸಹಿತ 12 ಜನರನ್ನು ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿ ಮತ್ತು ಮರಾಠಿ ಟಿವಿ ಚಾನೆಲ್‌ಗಳಾದ ಬಾಕ್ಸ್ ಸಿನೆಮಾ ಮತ್ತು ಫಕ್ತ್ ಮರಾಠಿ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ತಿರುಚುವ ಮೂಲಕ ವಂಚನೆ ಎಸಗಿವೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ಕಳೆದ ತಿಂಗಳು ಆರೋಪಿಸಿದ್ದರು. ಆದರೆ ಮೂರೂ ಟಿವಿ ಚಾನೆಲ್‌ಗಳು ಆರೋಪವನ್ನು ನಿರಾಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News