'ಬಿಬಿಸಿ 100 ವಿಮೆನ್ 2020' ಪಟ್ಟಿಯಲ್ಲಿ ಶಾಹೀನ್ ಬಾಗ್ ಹೋರಾಟಗಾರ್ತಿ ಬಿಲ್ಕಿಸ್ ಬಾನು

Update: 2020-11-25 14:21 GMT

ಹೊಸದಿಲ್ಲಿ: ಎಂಬತ್ತೆರಡು ವರ್ಷದ ಶಾಹೀನ್ ಬಾಗ್ ಹೋರಾಟಗಾರ್ತಿ ಬಿಲ್ಕಿಸ್ ಬಾನು, ಗಾನಾ ಗಾಯಕಿ ಐಸೈವಾಣಿ, ಪ್ಯಾರಾ ಅಥ್ಲೀಟ್ ಹಾಗೂ ಹಾಲಿ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಮಾನಸಿ ಜೋಷಿ ಮತ್ತು ಹವಾಮಾನ ಹೋರಾಟಗಾರ್ತಿ ರಿದ್ಧಿಮಾ ಪಾಂಡೆ ಮಂಗಳವಾರ ಬಿಡುಗಡೆಯಾದ 'ಬಿಬಿಸಿ 100 ವಿಮೆನ್ 2020' ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮಹಿಳೆಯರಾಗಿದ್ದಾರೆ.

ಈ ಪಟ್ಟಿ ಜಗತ್ತಿನಾದ್ಯಂತದ ಸ್ಫೂರ್ತಿದಾಯಕ ಮತ್ತು ಪ್ರಭಾವಿ ಮಹಿಳೆಯರ ಹೆಸರುಗಳ ಜತೆಗೆ ಕೆಲವು ಎಲೆಮರೆಯ ಕಾಯಿಗಳಂತೆ ಅಪ್ರತಿಮ ಸಾಧನೆಗೈದವರ ಹೆಸರುಗಳೂ ಇವೆ.

ಶಾಹೀನ್ ಬಾಗ್ ಹೋರಾಗಾರ್ತಿ ಬಿಲ್ಕಿಸ್ ಬಾನು ಅವರ ಹೆಸರು ಈ ಹಿಂದೆ 'ಟೈಮ್ ಮ್ಯಾಗಝಿನ್‍'ನ 2020ರ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೂಡ ಕಾಣಿಸಿಕೊಂಡಿತ್ತು.

'ಹೌ ವಿಮೆನ್ ಲೆಡ್ ಚೇಂಜ್ ಇನ್ 2020' (2020ರಲ್ಲಿ ಮಹಿಳೆಯರು ಹೇಗೆ ಬದಲಾವಣೆಯ ಮುಂಚೂಣಿ ವಹಿಸಿದ್ದರು) ಎಂಬ ವಿಷಯವನ್ನಾಧರಿಸಿ ಈ ಬಾರಿಯ ಪಟ್ಟಿ ತಯಾರಿಸಲಾಗಿದೆ.

ಬಿಬಿಸಿ ಪಟ್ಟಿಯಲ್ಲಿರುವ ಇತರ ಸಾಧಕಿಯರೆಂದರೆ ಫಿನ್‍ಲ್ಯಾಂಡ್‍ನ ಸಂಪೂರ್ಣವಾಗಿ ಮಹಿಳೆಯರನ್ನೊಳಗೊಂಡ ಮೈತ್ರಿ ಸರಕಾರದ ನಾಯಕಿ ಸನ್ನಾ ಮರೀನ್,  ಅವತಾರ್ ಎಂಡ್ ಮಾರ್ವೆಲ್ ಫಿಲ್ಮ್ಸ್  ತಾರೆ ಮಿಶೆಲ್ ಯೋಹ್,  ಆಕ್ಸಫರ್ಡ್ ವಿವಿಯ ಕೋವಿಡ್ ಲಸಿಕೆ ಸಂಶೋಧನಾ ತಂಡದ ಮುಖ್ಯಸ್ಥೆ ಸಾರಾ ಗಿಲ್ಬರ್ಟ್ ಹಾಗೂ ಹವಾಮಾನ ಹೋರಾಟಗಾರ್ತಿ ಮತ್ತು ನಟಿ ಜೇನ್ ಫೊಂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News