ಭಾರತ-ಅವೆುರಿಕ ಪರಮಾಣು ಸಹಕಾರ 10 ವರ್ಷ ವಿಸ್ತರಣೆ

Update: 2020-11-25 19:03 GMT

ವಾಶಿಂಗ್ಟನ್, ನ. 25: ಪರಮಾಣು ಶಕ್ತಿ ಕುರಿತ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದದ ಅವಧಿಯನ್ನು ಭಾರತ ಮತ್ತು ಅಮೆರಿಕ ಇನ್ನೂ 10 ವರ್ಷಗಳಿಗೆ ವಿಸ್ತರಿಸಿವೆ.

‘‘2010 ನವಂಬರ್ 7ರಂದು ಹೊಸದಿಲ್ಲಿಯಲ್ಲಿ ಅಮೆರಿಕ ಸರಕಾರ ಮತ್ತು ಭಾರತ ಸರಕಾರಗಳು ಸಹಿ ಹಾಕಿರುವ ಪರಮಾಣು ಶಕ್ತಿ ಭಾಗೀದಾರಿಕೆ ಒಪ್ಪಂದದ 10ನೇ ವರ್ಷದಲ್ಲಿ ನಾವಿದ್ದೇವೆ ಹಾಗೂ ಒಪ್ಪಂದದ ಅವಧಿಯನ್ನು ಇನ್ನೂ 10 ವರ್ಷಗಳ ಕಾಲ ವಿಸ್ತರಿಸುವುದಕ್ಕೆ ಉಭಯ ದೇಶಗಳು ಸಹಿ ಹಾಕಿವೆ’’ ಎಂದು ಮಂಗಳವಾರ ಬಿಡುಗಡೆಗೊಳಿಸಲಾದ ಜಂಟಿ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News