ಪತ್ರಕರ್ತನ ಕೊಲೆ ಪ್ರಕರಣ: ಮೂವರ ಬಂಧನ

Update: 2020-12-01 05:27 GMT

ಲಕ್ನೊ: ಕಳೆದ ವಾರ ರಾಜಧಾನಿ ಲಕ್ನೊದಿಂದ ಕೇವಲ 160 ಕಿ.ಮೀ. ದೂರದಲ್ಲಿರುವ ಬಲರಾಂಪುರ ಜಿಲ್ಲೆಯಲ್ಲಿ 37ರ ವಯಸ್ಸಿನ ಪತ್ರಕರ್ತ ಹಾಗೂ ಅವರ ಸ್ನೇಹಿತನನ್ನು ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮ ಮುಖ್ಯಸ್ಥನ ಮಗ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ನೋ ಮೂಲದ ದಿನಪತ್ರಿಕೆ ರಾಷ್ಟ್ರೀಯ ಸ್ವರೂಪ್ ನಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಸಿಂಗ್ ನಿರ್ಭಕ್ ಹಾಗೂ ಆತನ ಸ್ನೇಹಿತ ಪಿಂಟೂ ಸಾಹು ನವೆಂಬರ್ 27 ರಂದು ಕಲ್ವಾರಿ ಗ್ರಾಮದಲ್ಲಿರುವ ಪತ್ರಕರ್ತನ ಮನೆಯಲ್ಲಿ ಸಂಪೂರ್ಣ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾಹು ಸ್ಥಳದಲ್ಲೇ ಮೃತಪಟ್ಟಿದ್ದರೆ, ರಾಕೇಶ್ ಸಿಂಗ್ ಲಕ್ನೊ ಆಸ್ಪತ್ರೆಗೆ ಸೇರಿಸಿದ ಕೆಲವೇ ಗಂಟೆಗಳ ಬಳಿಕ ಮೃತಪಟ್ಟಿದ್ದರು.

ನಾನು ಪ್ರತಿದಿನ ಗ್ರಾಮದ ಮುಖ್ಯಸ್ಥ ಹಾಗೂ ಆತನ ಮಗನ ವಿರುದ್ಧ ಭ್ರಷ್ಟಾಚಾರ ಕುರಿತು ಬರೆಯುತ್ತಿದ್ದೆ.ಇದು  ಸತ್ಯವನ್ನು ವರದಿ ಮಾಡಿದ್ದಕ್ಕೆಸಿಕ್ಕ ಬೆಲೆ ಎಂದು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಪತ್ರಕರ್ತ ರಾಕೇಶ್ ಸಿಂಗ್ 2-3 ನಿಮಿಷಗಳ ಕಾಲ ಮಾತನಾಡಿರುವ ವೀಡಿಯೊದಲ್ಲಿ ಕೇಳಿಬಂದಿದೆ.

ಘಟನೆ ನಡೆದು 4 ದಿನಗಳ ಬಳಿಕ ಬಲರಾಮ್ ಪುರ ಪೊಲೀಸರುಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾಗಿ ಹೇಳಿದ್ದಾರೆ. ಗ್ರಾಮದ ಮುಖ್ಯಸ್ಥ ರಿಂಕು ಮಿಶ್ರಾ, ಕ್ರಿಮಿನಲ್ ಕೇಸ್ ಗಳನ್ನು ಎದುರಿಸುತ್ತಿರುವ ವ್ಯಕ್ತಿ ಅಕ್ರಂ, ಅಕ್ರಂನ ಸ್ನೇಹಿತ ಲಲಿತ್ ಮಿಶ್ರಾನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News