ಬಾಟಾ ಬ್ರ್ಯಾಂಡ್ಸ್ ನ ಜಾಗತಿಕ ಸಿಇಒ ಆಗಿ ನೇಮಕಗೊಂಡ ಮೊದಲ ಭಾರತೀಯ ಸಂದೀಪ್ ಕಠಾರಿಯಾ

Update: 2020-12-01 09:22 GMT

ಹೊಸದಿಲ್ಲಿ : ಖ್ಯಾತ ಪಾದರಕ್ಷೆ ತಯಾರಿಕಾ ಕಂಪೆನಿ ಬಾಟಾ ತನ್ನ ಇಂಡಿಯಾ ಸಿಇಒ ಸಂದೀಪ್ ಕಠಾರಿಯಾ ಅವರಿಗೆ ಭಡ್ತಿ ನೀಡಿ ಅವರನ್ನು  ಬಾಟಾ ಬ್ರ್ಯಾಂಡ್ಸ್ ನ ಜಾಗತಿಕ ಸಿಇಒ ಆಗಿ ತಕ್ಷಣ ನೇಮಕಗೊಳಿಸಿದೆ. ಸೋಮವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ಕುರಿತ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್ ಗೆ ಬಾಟಾ ಇಂಡಿಯಾ  ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಈ ನೇಮಕಾತಿಯೊಂದಿಗೆ ಕಠಾರಿಯಾ ಬಾಟಾ ಬ್ರ್ಯಾಂಡ್ಸ್ ನ ಜಾಗತಿಕ ಸಿಇಒ ಆಗಿ ನೇಮಕಗೊಂಡ ಮೊದಲ ಭಾರತೀಯರಾಗಿದ್ದಾರೆ. ಅವರು ಈ ಹುದ್ದೆಯಲ್ಲಿ ಕಳೆದ ಐದು ವರ್ಷ ಸೇವೆ ಸಲ್ಲಿಸಿದ ಅಲೆಕ್ಸಿಸ್ ನಸರ್ಡ್ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.

ಕಠಾರಿಯಾ 2017ರಲ್ಲಿ ಸಿಇಒ ಆಗಿ ಬಾಟಾ ಇಂಡಿಯಾ ಸಂಸ್ಥೆಯನ್ನು ಸೇರ್ಪಡೆಗೊಂಡಿದ್ದರು. ಈ ಹಿಂದೆ ಅವರು ಯುನಿಲಿವರ್, ಯಮ್ ಬ್ರ್ಯಾಂಡ್ಸ್ ಹಾಗೂ ವೊಡಾಫೋನ್ ಸಂಸ್ಥೆಗಳಿಗೆ ಭಾರತ ಮತ್ತು ಯುರೋಪ್‍ನಲ್ಲಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News