ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಿ: ಹರ್ಯಾಣದ ಬಿಜೆಪಿಯ ಮೈತ್ರಿ ಪಕ್ಷ ಆಗ್ರಹ

Update: 2020-12-01 10:49 GMT

ಚಂಡೀಗಢ :  ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ  ಹರ್ಯಾಣದಲ್ಲಿ ಆಡಳಿತರೂಢ ಬಿಜೆಪಿಯ ಮಿತ್ರ ಪಕ್ಷ, ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ  ಅವರ ಜನನಾಯಕ್ ಜನತಾ ಪಾರ್ಟಿ(ಜೆಜೆಪಿ) ಎಚ್ಚರಿಕೆ ನೀಡಿದೆ. ಸರಕಾರ  ವಿಶಾಲ ಮನಸ್ಸಿನಿಂದ ಯೋಚಿಸಿ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ ಎಂದು ಪಕ್ಷದ ಮುಖ್ಯಸ್ಥ ಅಜಯ್ ಚೌತಾಲ ಹೇಳಿದ್ದಾರೆ.

``ಸರಕಾರ ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕಿದೆ. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆ ಮುಂದುವರಿಯಲಿದೆ ಎಂಬ ಭರವಸೆಯನ್ನು ರೈತರಿಗೆ ನೀಡಬೇಕಿದೆ ಹಾಗೂ ಕೃಷಿ ಕಾನೂನುಗಳಲ್ಲೂ ಈ ಅಂಶ ಸೇರಿಸಬೇಕಿದೆ,'' ಎಂದು ಹೇಳಿದ ಅಜಯ್ ಚೌತಾಲ, ಅನ್ನದಾತರು  ಹತಾಶೆಯಿಂದ ರಸ್ತೆಗಳಲ್ಲಿದ್ದಾರೆ ಎಂದಿದ್ದಾರೆ.

ರೈತ ಮುಖಂಡರ ಜತೆ ಸರಕಾರದ ಮಾತುಕತೆಗಳು ಫಲಪ್ರದವಾಗುವ ಆಶಾವಾದವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪಕ್ಷೇತರ ಶಾಸಕ ಸೋಮವೀರ್ ಸಂಗ್ವನ್ ಅವರು ಹರ್ಯಾಣ ಮೈತ್ರಿ ಸರಕಾರದಿಂದ  ಹೊರಬಂದು ಪ್ರತಿಭಟನಾನಿರತ ರೈತರಿಗೆ ಬೆಂಬಲ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News