ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಹೇಳಿಕೆಗೆ ಭಾರತದ ಅಸಮಾಧಾನ

Update: 2020-12-01 11:19 GMT
ಅನುರಾಗ್ ಶ್ರೀವಾಸ್ತವ

ಹೊಸದಿಲ್ಲಿ : ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹಾಗೂ ಆ ದೇಶದ ರಕ್ಷಣಾ ಸಚಿವರ ಸಹಿತ ಇತರ ನಾಯಕರ ಹೇಳಿಕೆಗಳಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಅವರ ಹೇಳಿಕೆಗಳು ಅನಪೇಕ್ಷಿತ ಹಾಗೂ ಅವರಿಗೆ ಆ ಕುರಿತಾದ ಸರಿಯಾದ ಮಾಹಿತಿ ಇರದೇ ಮಾತನಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

``ಪ್ರಜಾಪ್ರಭುತ್ವ ದೇಶವೊಂದರ ಆಂತರಿಕ ವ್ಯವಹಾರಗಳ  ಕುರಿತು ಇಂತಹ ಹೇಳಿಕೆಗಳು ಸರಿಯಲ್ಲ.  ರಾಜತಾಂತ್ರಿಕ  ಮಾತುಕತೆಗಳನ್ನು ರಾಜಕೀಯ ಉದ್ದೇಶಗಳಿಗೆ  ಬಳಸಬಾರದು,'' ಎಂದು ಶ್ರೀವಾಸ್ತವ ಹೇಳಿದ್ದಾರೆ.

ಕೆನಡಾದಲ್ಲಿ ಗುರುನಾನಕ್ ಜಯಂತಿ ದಿನದಂದು ಶುಭಾಶಯ ಕೋರುವ ಸಂದರ್ಭ ಜಸ್ಟಿನ್ ಟ್ರೂಡೊ ಭಾರತದ ರೈತರ ಪ್ರತಿಭಟನೆಗಳ ಕುರಿತು ಮಾತನಾಡಿ ಪ್ರತಿಭಟನೆ ನಡೆಸುವ ಹಕ್ಕನ್ನು ಕೆನಡಾ ಯಾವತ್ತೂ ಸಮರ್ಥಿಸುತ್ತದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News