ಮೂರು ದಶಕಗಳಲ್ಲಿ ಮೊದಲ ಬಾರಿ ಭಾರತದಿಂದ ಅಕ್ಕಿ ಖರೀದಿಸಿದ ಚೀನಾ!

Update: 2020-12-02 10:08 GMT

ಹೊಸದಿಲ್ಲಿ :  ಕನಿಷ್ಠ ಕಳೆದ ಮೂರು ದಶಕಗಳಲ್ಲೇ ಮೊದಲ ಬಾರಿಗೆ ಚೀನಾ ದೇಶವು ಭಾರತದಿಂದ ಅಕ್ಕಿ ಅಮದು ಮಾಡಲು ಆರಂಭಿಸಿದೆ. ದೇಶದಲ್ಲಿ ಸೀಮಿತ ಪ್ರಮಾಣದ ಅಕ್ಕಿ ಪೂರೈಕೆ ಹಾಗೂ ಬಹಳಷ್ಟು ಕಡಿಮೆ ದರದಲ್ಲಿ ಅಕ್ಕಿ ನೀಡಲು ಭಾರತ ಮುಂದೆ ಬಂದಿರುವುದರಿಂದ  ಈ ಬೆಳವಣಿಗೆ ಸಾಧ್ಯವಾಗಿದೆ.

ಭಾರತ ಜಗತ್ತಿನಲ್ಲಿಯೇ ಗರಿಷ್ಠ ಅಕ್ಕಿ ರಫ್ತುಗೊಳಿಸುವ ದೇಶವಾಗಿದ್ದು ಚೀನಾ ಗರಿಷ್ಠ ಅಕ್ಕಿ ಆಮದುದಾರ ದೇಶವಾಗಿದೆ.  ಚೀನಾ ವಾರ್ಷಿಕ ಸುಮಾರು 40 ಲಕ್ಷ ಟನ್ ಅಕ್ಕಿಯನ್ನು ಆಮದು ಮಾಡುತ್ತಿದ್ದರೂ ಭಾರತದ ಅಕ್ಕಿಯ ಗುಣಮಟ್ಟದ ವಿಚಾರವನ್ನು ಮುಂದಿಟ್ಟುಕೊಂಡು ಇಲ್ಲಿಯ ತನಕ ಇಲ್ಲಿನ ಅಕ್ಕಿ ಆಮದು ಮಾಡುತ್ತಿರಲಿಲ್ಲ.

ಎರಡೂ ದೇಶಗಳ ನಡುವೆ ಗಡಿ ಉದ್ವಿಗ್ನತೆ ಮುಂದುವರಿದಂತಹ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

“ಮೊದಲ ಬಾರಿ ಭಾರತದ ಅಕ್ಕಿಯನ್ನು ಚೀನಾ ಖರೀದಿಸಿದೆ.  ಇಲ್ಲಿಯ ಅಕ್ಕಿಯ ಗುಣಮಟ್ಟ ಗಮನದಲ್ಲಿರಿಸಿ ಮುಂದಿನ ವರ್ಷ ಇನ್ನೂ ಹೆಚ್ಚು ಅಕ್ಕಿ  ಖರೀದಿಸುವ ಸಾಧ್ಯತೆಯಿದೆ’’ ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ. ವಿ. ಕೃಷ್ಣ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News