ಮದ್ರಾಸ್ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ಕರ್ಣನ್ ಚೆನ್ನೈಯಲ್ಲಿ ಬಂಧನ
Update: 2020-12-02 17:01 IST
ಚೆನ್ನೈ : ನ್ಯಾಯಾಧೀಶರು ಹಾಗೂ ನ್ಯಾಯಾಲಯ ಸಿಬ್ಬಂದಿಯನ್ನು ನಿಂದಿಸುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದ ಮದ್ರಾಸ್ ಹೈಕೋರ್ಟ್‍ನ ಮಾಜಿ ನ್ಯಾಯಾಧೀಶ ಸಿ. ಎಸ್. ಕರ್ಣನ್ ಅವರನ್ನು ಇಂದು ಚೆನ್ನೈಯಲ್ಲಿ ಬಂಧಿಸಲಾಗಿದೆ.
ಮದ್ರಾಸ್ ಹೈಕೋರ್ಟ್ ಮತ್ತು ಕೋಲ್ಕತ್ತಾ ಹೈಕೋರ್ಟ್‍ನಲ್ಲಿ ಸೇವೆ ಸಲ್ಲಿಸಿದ್ದ ಜಸ್ಟಿಸ್ ಕರ್ಣನ್ ತಮ್ಮ ನಿವೃತ್ತಿ ನಂತರ ನ್ಯಾಯಾಧೀಶರು ಮತ್ತು ನ್ಯಾಯಾಲಯದ ಅಧಿಕಾರಿಗಳನ್ನು ನಿಂದಿಸುವ ವೀಡಿಯೊ ಬಿಡುಗಡೆ ಮಾಡಿದ್ದರು.
ಈ ಬಗ್ಗೆ ಪುದುಚೆರಿ ಬಾರ್ ಕೌನ್ಸಿಲ್ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಕರ್ಣನ್ ವಿರುದ್ಧ ಐಪಿಸಿಯ ನಾಲ್ಕು ಸೆಕ್ಷನ್‍ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ನಂತರ ಕರ್ಣನ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ ಮತ್ತೆ ಮದ್ರಾಸ್ ಹೈಕೋರ್ಟ್‍ಗೆ ಅಪೀಲು ಸಲ್ಲಿಸಲಾಗಿತ್ತು. ಇದೀಗ ಕರ್ಣನ್ ಅವರನ್ನು ಅವರ ನಿವಾಸದಿಂದ ಬಂಧಿಸಲಾಗಿದೆ.