ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಹೊಸ ಕ್ರೆಡಿಟ್ ಕಾರ್ಡ್ ನೀಡಿಕೆಗೆ ಆರ್ ಬಿಐ ತಾತ್ಕಾಲಿಕ ನಿರ್ಬಂಧ

Update: 2020-12-03 10:23 GMT

ಹೊಸದಿಲ್ಲಿ : ದೇಶದ ಅತ್ಯಂತ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‍ಡಿಎಫ್‍ಸಿ ಬ್ಯಾಂಕ್‍ನ ಇಲೆಕ್ಟ್ರಾನಿಕ್ ಬ್ಯಾಂಕಿಂಗ್ ಸೇವೆಗಳಲ್ಲಿ ಆಗಾಗ ಉಂಟಾಗುತ್ತಿರುವ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,  ಎಚ್‍ಡಿಎಫ್‍ಸಿ ಬ್ಯಾಂಕಿಗೆ ಸೂಚನೆ ನೀಡಿ ಅದರ  ಎಲ್ಲಾ ಡಿಜಿಟಲ್-ಬಿಸಿನೆಸ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹೇಳಿದೆ. ಉಂಟಾಗಿರುವ ಲೋಪಗಳನ್ನು ಪರಿಶೀಲಿಸಿ  ಅದಕ್ಕೆ ಕಾರಣವೇನೆಂದು ತಿಳಿಯಬೇಕು ಎಂದು ಬ್ಯಾಂಕ್‍ನ ಆಡಳಿತ ಮಂಡಳಿಗೆ ಆರ್ ಬಿಐ ಹೇಳಿದೆ.

ರಿಸರ್ವ್ ಬ್ಯಾಂಕ್ ಈ ಆದೇಶವನ್ನು ಡಿಸೆಂಬರ್ 2ರಂದು ನೀಡಿದೆ ಎಂದು ಎಚ್‍ಡಿಎಫ್‍ಸಿ ಬ್ಯಾಂಕ್   ಸ್ಟಾಕ್ ಎಕ್ಸ್‍ಚೇಂಜ್‍ಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

ಕಳೆದೆರಡು ವರ್ಷಗಳಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್‍ನ  ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಹಾಗೂ ಇತರ ಪೇಮೆಂಟ್ ಸವಲತ್ತುಗಳಲ್ಲಿ ಆಗಾಗ ವ್ಯತ್ಯಯ ಉಂಟಾಗುತ್ತಿದ್ದುದರಿಂದ ಈ ಆದೇಶ ಹೊರಬಿದ್ದಿದೆ.

ತೀರಾ ಇತ್ತೀಚೆಗೆ ಅಂದರೆ, ನವೆಂಬರ್ 21ರಂದು ಈ ಸಮಸ್ಯೆ ಕಾಣಿಸಿಕೊಂಡಾಗ ಹಲವು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ನಡೆಸುವುದು ಅಸಾಧ್ಯವಾಗಿತ್ತು. ತನ್ನ ಪ್ರಾಥಮಿಕ ಡಾಟಾ ಕೇಂದ್ರದಲ್ಲಿ ಉಂಟಾದ ವಿದ್ಯುತ್ ವ್ಯತ್ಯಯದಿಂದ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬ್ಯಾಂಕ್ ಆಗ ಸಬೂಬು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News