ಕೊರೋನ ಲಸಿಕೆಯ ಪರೀಕ್ಷಾರ್ಥ ಡೋಸ್ ಪಡೆದಿದ್ದ ಹರ್ಯಾಣ ಸಚಿವ ಅನಿಲ್ ವಿಜ್ ಗೆ ಕೋವಿಡ್-19 ದೃಢ

Update: 2020-12-05 06:59 GMT

ಹೊಸದಿಲ್ಲಿ: ನವೆಂಬರ್ 20ರಂದು ಕೊರೋನ ವೈರಸ್ ಲಸಿಕೆ ಕೊವಾಕ್ಸಿನ್ ಪರೀಕ್ಷಾರ್ಥ ಡೋಸ್ ಸ್ವೀಕರಿಸಿದ್ದ ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.

ನನಗೆ  ಕೊರೋನ ವೈರಸ್ ಸೋಂಕು ತಗಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಶನಿವಾರ ಹೇಳಿದ್ದಾರೆ.

ನನಗೆ ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಅಂಬಾಲದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೊರೋನ ಪರೀಕ್ಷೆಗೆ ಒಳಗಾಗಬೇಕಾಗಿ ಸಲಹೆ ನೀಡುವೆ ಎಂದು ವಿಜ್ ಹೇಳಿದ್ದಾರೆ.

ಕೊರೋನ ವೈರಸ್ ಕಾಯಿಲೆಯ ವಿರುದ್ಧ ಸಂಭಾವ್ಯ ಲಸಿಕೆಯ ಮೂರನೇ ಹಂತದ ಪ್ರಯೋಗದ ಭಾಗವಾಗಿ ನವೆಂಬರ್ 20 ರಂದು ಅಂಬಾಲದ ಆಸ್ಪತ್ರೆಯಲ್ಲಿ ಭಾರತ್ ಬಯೋಟೆಕ್ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ(ಐಸಿಎಂ ಆರ್)ಸಹಯೋಗದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಡೋಸ್ ನ್ನು ಅನಿಲ್ ವಿಜ್ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News