×
Ad

"ನಾನು ಪಕ್ಷ ಮತ್ತು ರೈತರ ಪರ ನಿಲ್ಲುತ್ತೇನೆ'' ಎಂದು ಹೇಳಿ ಟ್ರೋಲ್‍ಗೊಳಗಾದ ಬಿಜೆಪಿ ಸಂಸದ ಸನ್ನಿ ಡಿಯೋಲ್

Update: 2020-12-07 14:47 IST

ಹೊಸದಿಲ್ಲಿ : ನಟ ಹಾಗೂ ಗುರುದಾಸಪುರ್ ಕ್ಷೇತ್ರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ರವಿವಾರ ಟ್ವೀಟ್ ಮೂಲಕ ರೈತರ ಹೋರಾಟದ ಕುರಿತು ನೀಡಿದ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿ ಅವರು ಟ್ರೋಲ್‍ಗೊಳಗಾಗುವಂತಾಗಿದೆ.

"ಕೆಲ ಜನರು ಪರಿಸ್ಥಿತಿಯ ಲಾಭ ಪಡೆದು ಸಮಸ್ಯೆ ಸೃಷ್ಟಿಸುತ್ತಿದ್ದಾರೆಂದು ತಿಳಿದಿದೆ. ಅವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ, ಅವರಿಗೆ ಅವರದ್ದೇ ಆದ ಅಜೆಂಡಾ ಇದೆ. ನಾನು ನನ್ನ ಪಕ್ಷ ಹಾಗೂ ರೈತರ ಜತೆಗೆ ನಿಲ್ಲುತ್ತೇನೆ ಹಾಗೂ ಯಾವತ್ತೂ ರೈತರ ಜತೆ ನಿಲ್ಲುತ್ತೇನೆ. ನಮ್ಮ ಸರಕಾರ ಯಾವತ್ತೂ ರೈತರ ಕಲ್ಯಾಣದ ಬಗ್ಗೆ ಚಿಂತಿಸುತ್ತದೆ,'' ಎಂದು ಸನ್ನಿ ಹೇಳಿದ್ದರು. ಅವರ ಈ ಹೇಳಿಕೆಯಲ್ಲಿ "ನಾನು ನನ್ನ ಪಕ್ಷ ಹಾಗೂ ರೈತರ ಜತೆಗೆ ನಿಲ್ಲುತ್ತೇನೆ,'' ಎಂಬ ಭಾಗವೇ ನೆಟ್ಟಿಗರ ಗಮನ ಸೆಳೆದಿದ್ದು ಇದನ್ನೇ ಕೈಗೆತ್ತಿಕೊಂಡು ಹಲವರು ಸನ್ನಿ ಡಿಯೋಲ್‍ರನ್ನು ಟ್ರೋಲ್ ಮಾಡಿದ್ದಾರೆ.

"ನಿಮಗೆ ಧೈರ್ಯವಿಲ್ಲ, ನೀವು ಯಾರ ಜತೆಗೂ ನಿಲ್ಲಲು ಸಾಧ್ಯವಿಲ್ಲ,'' ಎಂದು ಒಬ್ಬರು ಟ್ವೀಟ್ ಮಾಡಿದರೆ ಇನ್ನೊಬ್ಬರು ಸನ್ನಿ ಡಿಯೋಲ್ ಅವರ ಹಿಟ್ ಚಿತ್ರ ದಾಮಿನಿಯನ್ನು ಉಲ್ಲೇಖಿಸಿ 'ಐ ಸ್ಟ್ಯಾಂಡ್ ವಿದ್ ಚಡ್ಡಾ ಎಂಡ್ ದಾಮಿನಿ,' ಎಂದು ಮಾರ್ಮಿಕವಾಗಿ ಬರೆದಿದ್ದಾರೆ. ಇನ್ನೊಬ್ಬ ಟ್ವಿಟರಿಗ ಸನ್ನಿ ಡಿಯೋಲ್ ಹೇಳಿಕೆಯನ್ನು ಅಣಕಿಸಿ "ಐ ಸ್ಟ್ಯಾಂಡ್ ವಿದ್ ವೆಜನ್ಸ್ ಎಂಡ್ ನಾನ್-ವೆಜಿಟೇರಿಯನ್ಸ್,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News