ಪೆಟ್ರೋಲ್, ಡೀಸೆಲ್ ಬೆಲೆ ಸತತ 6ನೇ ದಿನ ಹೆಚ್ಚಳ; 2 ವರ್ಷಗಳ ಬಳಿಕ ಗರಿಷ್ಠ ಮಟ್ಟಕ್ಕೆ ಏರಿದ ಇಂಧನ ದರ

Update: 2020-12-07 11:14 GMT

ಹೊಸದಿಲ್ಲಿ: ಸತತ ಆರನೇ ದಿನವಾದ ಸೋಮವಾರವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಇದೀಗ ಸೆಪ್ಟಂಬರ್ 2018ರ ಬಳಿಕ ದರ ಏರಿಕೆಯು ಗರಿಷ್ಠ ಮಟ್ಟಕ್ಕೆ ತಲುಪಿದೆ.

ದೇಶದೆಲ್ಲೆಡೆ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ದರ 29-31 ಪೈಸೆ ಹೆಚ್ಚಳವಾಗಿದೆ. ಇಂದಿನ ದರ ಏರಿಕೆಯೊಂದಿಗೆ ಪೆಟ್ರೋಲ್ ದರ ದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 83.71 ರೂ. ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಹಾಗೂ ಪಾಟ್ನಾನಗರಗಳಲ್ಲಿ ಪ್ರತಿ ಲೀಟರ್ ದರ  ರೂ. 85ರ ಗಡಿ ದಾಟಿದೆ.

ಮುಂಬೈ ಹಾಗೂ ಜೈಪುರದಲ್ಲಿ ಪೆಟ್ರೋಲ್ ಲೀಟರ್ ದರ 90 ರೂ.ಗೂ ಅಧಿಕವಾಗಿದೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ದರ ಎಲ್ಲ ನಗರಗಳಲ್ಲಿ ಹೆಚ್ಚಳವಾಗುತ್ತಿದೆ.

ಡೀಸೆಲ್ ದರದಲ್ಲೂ ಏರಿಕೆಯಾಗುತ್ತಿದೆ. ನಿನ್ನೆ 30 ಪೈಸೆ ಹೆಚ್ಚಳವಾಗಿದ್ದರೆ, ಇಂದು ದಿಲ್ಲಿಯಲ್ಲಿ 26 ಪೈಸೆ ಹೆಚ್ಚಾಗಿದೆ.ಇದೀಗ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 73.87 ರೂ.ಆಗಿದೆ. ಮುಂಬೈ, ಜೈಪುರ, ಹೈದರಾಬಾದ್ ಹಾಗೂ ಭುವನೇಶ್ವರದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 80 ರೂ. ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News