×
Ad

ನಮಾಝ್ ನಿರ್ವಹಿಸುತ್ತಿದ್ದ ಮುಸ್ಲಿಂ ರೈತರ ಜತೆ ಒಗ್ಗಟ್ಟು ಪ್ರದರ್ಶಿಸಿದ ಸಿಖ್ ರೈತರು

Update: 2020-12-07 16:44 IST

ಹೊಸದಿಲ್ಲಿ: ಸರ್ವಧರ್ಮ ಸೌಹಾರ್ದತೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂಬುದು ಸರ್ವವಿದಿತ. ರಾಜಧಾನಿಯ ಗಡಿ ಭಾಗಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯೂ ಇಂತಹ ಒಂದು ಸರ್ವಧರ್ಮ ಸೌಹಾರ್ದತೆಯ ಕ್ಷಣಕ್ಕೆ ಸಾಕ್ಷಿಯಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಹೆಚ್ಚಿನ ರೈತರು ಪಂಜಾಬ್‍ನಿಂದ ಆಗಮಿಸಿದ ಸಿಖ್ ರೈತರಾಗಿದ್ದರೆ ಪ್ರತಿಭಟನಾಕಾರರ ಪೈಕಿ ಹಲವಾರು ಹಿಂದುಗಳು ಮತ್ತು ಮುಸ್ಲಿಮರೂ ಇದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಮುಸ್ಲಿಂ ರೈತರು ಪ್ರತಿಭಟನೆಗಳ ನಡುವೆಯೇ ನಮಾಝ್ ನಿರ್ವಹಿಸಲು ಸಮಯ ಹೊಂದಿಸುತ್ತಾರೆ. ಈ ಸಂದರ್ಭ ಇತರ ಎಲ್ಲಾ ಪ್ರತಿಭಟನಾಕಾರರು ಅವರ ಸುತ್ತ ನಿಂತು ಅವರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವ ವೀಡಿಯೋವನ್ನು ಯುಟ್ಯೂಬ್‍ನಲ್ಲಿ 'ಡೆಕ್ಕನ್ ಡೈಜೆಸ್ಟ್' ಪೋಸ್ಟ್ ಮಾಡಿದೆ.

"ಪ್ರತಿಭಟನಾ ಸ್ಥಳದಲ್ಲಿ ಮುಸ್ಲಿಮರು ನಮಾಝ್ ಸಲ್ಲಿಸುತ್ತಿರುವ ವೇಳೆ ಸಿಖ್ ಸಹೋದರರು ಅವರ ಜತೆ ಒಗ್ಗಟ್ಟಿನಿಂದ ನಿಂತಿರುವುದು,'' ಎಂದು ವೀಡಿಯೋ ಜತೆಗೆ ಬರೆಯಲಾಗಿದೆ.

ಈ ವೀಡಿಯೋಗೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. "ವೀಡಿಯೋ ನನ್ನನ್ನು ಭಾವಪರವಶಳನ್ನಾಗಿಸಿದೆ,'' ಎಂದು ಪತ್ರಕರ್ತೆ ರಾಣಾ ಅಯ್ಯುಬ್ ಟ್ವೀಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News